ಅಡಿಕೆ ಕೊಳೆರೋಗ ವಿಚಾರ:
ಸಿ.ಎಂ ಜೊತೆ ಶಾಸಕ ಅಶೋಕ್ ರೈ ಚರ್ಚೆ
ಪುತ್ತೂರು: ದ ಕ ಜಿಲ್ಲೆಯಲ್ಲಿ ಅಡಿಕೆಗೆ ಕೊಳೆರೋಗ ಭಾದಿಸಿದ್ದು ಇದರಿಂದ ಅಡಿಕೆ ಬೆಳೆಗಾರರು ಸಂಕಷ್ಟಕ್ಕೆ ಒಳಗಾಗಿದ್ದು ಅವರಿಗೆ ಸೂಕ್ತ ಪರಿಹಾರ ಒದಗಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ಶಾಸಕ ಅಶೋಕ್ ರೈ ಚರ್ಚೆ ನಡೆಸಿದರು.

ಬುಧವಾರ ಮುಖ್ಯಮಂತ್ರಿ ಅವರನ್ನು ಭೇಟಿಯಾದ ಶಾಸಕರು ಈ ಭಾರಿ ಕರಾವಳಿಯಲ್ಲಿ ವಿಪರೀತ ಮಳೆಯಾಗಿದ್ದು ಈ ಕಾರಣಕ್ಕೆ ಅಡಿಕೆಗೆ ಕೊಳೆರೋಗ ಉಂಟಾಗಿದೆ. ಅಡಿಕೆಯನ್ನೇ ನಂಬಿ ದ ಕ ಜಿಲ್ಲೆಯ ಬಹುತೇಕ ಕುಟುಂಬಗಳು ಜೀವನ ಸಾಗಿಸುತ್ತಿದೆ. ಅಡಿಕೆ ನಾಶವಾದರೆ ಅವರ ಬದುಕು ದುಸ್ತರವಾಗುತ್ತದೆ. ಈ ನಿಟ್ಟಿನಲ್ಲಿ ಕೊಳೆರೋಗ ಉಂಟಾದ ಕಡೆಗಳಲ್ಲಿ ಸಮೀಕ್ಷೆ ನಡೆಸುವ ಮೂಲಕ ಕೃಷಿಕರಿಗೆ ಸೂಕ್ತ ಪರಿಹಾರವನ್ನು ನೀಡಬೇಕು ಎಂದು ಶಾಸಕರು ಮನವಿ ಮಾಡಿದರು.
ಅಧಿವೇಶನದಲ್ಲಿ ಇಂದು ಅಡಿಕೆ ವಿಚಾರದ ಬಗ್ಗೆ ಶಾಸಕ ಅಶೋಕ್ ರೈ ಪ್ರಶ್ನೆ ಕೇಳಲಿದ್ದು ಇದರ ಮುನ್ನಾ ದಿನ ಸಿಎಂ ಜೊತೆ ಚರ್ಚೆ ನಡೆದಿರುವುದು ಕೃಷಿಕರಲ್ಲಿ ಭರವಸೆ ಮೂಡಿಸಿದೆ.