ಪುತ್ತೂರು: ಬಸ್ ಹಾಗೂ ಆಟೋ ರಿಕ್ಷಾ ನಡುವೆ ನಡುವೆ ಭೀಕರ ಅಪಘಾತ: ಇಬ್ಬರು ಮೃತ್ಯು
ಪುತ್ತೂರು: ಬಸ್ ಹಾಗೂ ಆಟೋ ರಿಕ್ಷಾ ನಡುವೆ ಅಪಘಾತ ಸಂಭವಿಸಿ ಘಟನೆಯಲ್ಲಿ ಆಟೋ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆ ಹಾಗೂ ಮಗು ಮೃತಪಟ್ಟಿರುವುದಾಗಿ ವರದಿಯಾಗಿದೆ. ಘಟನೆ ನೆಹರುನಗರದಲ್ಲಿ ನಡೆದಿದೆ.


ಕುಂಬ್ರ ಗಟ್ಟಮನೆ ನಿವಾಸಿ ಜಮೀಲಾ(52.ವ) ಹಾಗೂ ತನ್ಸಿರ್ (4 ವ.) ಮೃತರು. ಆಟೋರಿಕ್ಷಾ ಚಾಲಕ, ಓರ್ವ ಮಹಿಳೆ ಮತ್ತು ಮಗು ಪುತ್ತೂರಿನ ಮಹಾವೀರ ಆಸ್ಪತ್ರೆಗೆ ದಾಖಲಾಗಿದ್ದಾರೆಎಂದು ತಿಳಿದು ಬಂದಿದೆ.