ಸುಳ್ಯ : ಅರಂತೋಡು ಬಳಿ KSRTC ಬಸ್ಸುಗಳ ಮಧ್ಯೆ ಅಪಘಾತ
ಸುಳ್ಯ : ಅರಂತೋಡು ಎನ್ ಎಂ ಪಿ ಯು ಕಾಲೇಜು ಬಳಿ ಕೆ.ಎಸ್ ಆರ್ ಟಿ ಸಿ ಬಸ್ಸುಗಳ ಮಧ್ಯೆ ಅಪಘಾತವಾಗಿರುವ ಘಟನೆ ನಡೆದಿದೆ.

ಅರಂತೋಡು ಎನ್ ಎಂ ಪಿ ಯು ಕಾಲೇಜ್ ಬಳಿ, ಸುಳ್ಯ ದಿಂದ ಮಡಿಕೇರಿ ಭಾಗಕ್ಕೆ ಮತ್ತು ಮೈಸೂರು ಭಾಗದಿಂದ ಸುಳ್ಯಕ್ಕೆ ಆಗಮಿಸುತ್ತಿದ್ದ ಸರಕಾರಿ ಬಸ್ಸುಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು ಘಟನೆಯಲ್ಲಿ ಓರ್ವ ಮಹಿಳೆ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಹಲವರು ಗಾಯಗೊಂಡಿದ್ದಾರೆ. ಗಾಯಗೊಂಡವರಿಗೆ ಸುಳ್ಯ ಕೆ.ವಿ.ಜಿ ಆಸ್ಪತ್ರೆ ಹಾಗೂ ಸುಳ್ಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.



