ಖುರ್ರತುಸ್ಸಾದಾತ್ ಕೂರತ್ ತಂಙಳ್ ಉರೂಸ್ ಯಶಸ್ವಿಗೊಳಿಸುವಂತೆ ದ.ಕ ಈಸ್ಟ್ ಎಸ್ ವೈ ಎಸ್ ಕರೆ
ಪುತ್ತೂರು: ಖುರ್ರತುಸ್ಸಾದಾತ್ ಕೂರತ್ ತಂಙಳ್ ಉರೂಸ್ 2025 ಜೂನ್ 26,27,28,29 ದಿನಾಂಕಗಳಲ್ಲಿ ಬಹಳ ವಿಜೃಂಭಣೆಯಿಂದ ನಡೆಯಲಿದ್ದು,ಖತಮುಲ್ ಖುರ್‌ಆನ್, ರಾತೀಬ್ ಮೌಲಿದ್ ಸಹಿತ ಹಲವಾರು ಆಧ್ಯಾತ್ಮಿಕ ಮಜ್ಲಿಸ್‌ಗಳು, ಪ್ರಭಾಷಣಗಳು,ಸಾಮಾಜಿಕ ಕಾನ್ಫರೆನ್ಸ್‌ಗಳು ಅನ್ನದಾನ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡಯಲಿದೆ.

ಸಮಸ್ತ ಕೇಂದ್ರ ಮುಶಾವರ ಉಲಮಾಗಳು ಸೇರಿದಂತೆ ಹಲವಾರು ಧಾರ್ಮಿಕ, ಸಾಮಾಜಿಕ,ರಾಜಕೀಯ ನಾಯಕರು ಭಾಗವಹಿಸಲಿದ್ದಾರೆ. ಎಸ್ ವೈ ಎಸ್ ದ.ಕ ಈಸ್ಟ್ ಜಿಲ್ಲಾ ವ್ಯಾಪ್ತಿಯ 6 ಝೋನ್ 35 ಸರ್ಕಲ್ ಹಾಗೂ 205 ಯೂನಿಟ್‌ಗಳಲ್ಲಿ ಪ್ರಚಾರ ಇನ್ನಷ್ಟು ವ್ಯಾಪಕಗೊಳಿಸಿ, ಕಾರ್ಯಕರ್ತರು ಆಗಮಿಸಿ ಖುರ್ರತುಸ್ಸಾದಾತ್ ಉರೂಸ್ ಯಶಸ್ವಿಗೊಳಿಸುವಂತೆ ಮನವಿ ಮಾಡಿದ್ದಾರೆ.