ಮಹಿಳೆಯನ್ನು ಬಚಾವ್ ಮಾಡಿದ ಟ್ರಾಫಿಕ್ ಜಾಮ್!
ಅಹಮದಾಬಾದ್‌ನಿಂದ ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಜೂ.12ರಂದು ಅಪಘಾತಕ್ಕೀಡಾದ ಕೆಲವೇ ನಿಮಿಷಗಳ ಮೊದಲು, ಭೂಮಿ ಚೌಹಾಣ್ ಎಂಬ ಮಹಿಳೆ ಟ್ರಾಫಿಕ್‌ನಲ್ಲಿ ಸಿಲುಕಿಕೊಂಡಿದ್ದರಿಂದ ಕೇವಲ 10 ನಿಮಿಷಗಳ ಅಂತರದಲ್ಲಿ ವಿಮಾನವನ್ನು ತಪ್ಪಿಸಿಕೊಂಡರು ಎಂದು ವರದಿಯಾಗಿದೆ.

ಕೇವಲ ಹತ್ತು ನಿಮಿಷಗಳ ಅಂತರದಲ್ಲಿ ವಿಮಾನ ದುರಂತದಿಂದ ಪಾರಾಗಿರುವ ಈ ಮಹಿಳೆ ಭೂಮಿ ಮೇಲಿನ ಅದೃಷ್ಟವಂತ ಮಹಿಳೆಯಾಗಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿರುವ ಮಹಿಳೆ, ಘಟನೆಯಿಂದ ನಾನು ಇನ್ನೂ ನಡುಗುತ್ತಿದ್ದೇನೆ ಎಂದು ತಮ್ಮ ಆಘಾತದ ಅನುಭವವನ್ನು ವ್ಯಕ್ತಪಡಿಸಿದ್ದಾರೆ.
ವಿಮಾನ ದುರಂತದಲ್ಲಿ ನೂರಾರು ಪ್ರಯಾಣಿಕರು ದುರ್ಮರಣಕ್ಕೀಡಾದ ಸುದ್ದಿ ಕೇಳಿದಾಗ ನಾನು ಸಂಪೂರ್ಣವಾಗಿ ಆಘಾತಗೊಂಡೆ. ನನ್ನ ದೇಹ ಅಕ್ಷರಶಃ ನಡುಗುತ್ತಿದೆ. ಮಾತನಾಡಲು ಸಾಧ್ಯವಾಗುತ್ತಿಲ್ಲ. ಈ ಘಟನೆಯ ಬಗ್ಗೆ ಯೋಚಿಸಿದಾಗ ನನ್ನ ಮನಸ್ಸು ಖಾಲಿಯಾಗಿದೆ ಎಂದಿದ್ದಾರೆ.