ವಿಮಾನ ಪತನ: ಪವಾಡ ಸದೃಶವಾಗಿ ಪಾರಾದ ಏಕೈಕ ಪ್ರಯಾಣಿಕ
ಅಹಮದಾಬಾದ್: ಏರ್ ಇಂಡಿಯಾ ವಿಮಾನ ದುರಂತದಲ್ಲಿ 40 ವರ್ಷದ ವಿಶ್ವಾಸ್ ಕುಮಾರ್ ರಮೇಶ್ ಅವರು ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದಾರೆ ಎಂದು ವರದಿಯಾಗಿದೆ. ಅವರು 11A ಸೀಟಿನಲ್ಲಿ ಕುಳಿತಿದ್ದರು ಎನ್ನಲಾಗಿದೆ.

ವಿಮಾನ ನಿಲ್ದಾಣದ ಟೇಕಾಫ್ ಆದ 30 ಸೆಕೆಂಡ್‌ಗಳ ನಂತರ ದೊಡ್ಡ ಶಬ್ಧ ಕೇಳಿ ಬಂತು ನಂತರ ವಿಮಾನ ಪತನ ಹೊಂದಿತು ಎಂದು ಅವರು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ವಿಶ್ವಾಸ್ ಅವರ ಎದೆ , ಕಣ್ಣು, ಪಾದಗಳು ಗಾಯಗೊಂಡಿದ್ದು ಅವರು ಈಗ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ನಾನು ಎದ್ದು ನೋಡಿದಾಗ ನನ್ನ ಸುತ್ತಲೂ ಶವಗಳ ರಾಶಿ ಇತ್ತು. ಸುತ್ತಲೂ ಛಿದ್ರಗೊಂಡ ವಿಮಾನದ ಭಾಗಗಳು ಬಿದ್ದಿದ್ದವು. ಭಯಗೊಂಡು ನಾನು ಓಡಲು ಆರಂಭಿಸಿದ್ದೆ. ಈ ವೇಳೆ ಯಾರೋ ನನ್ನನ್ನು ಹಿಡಿದು ಅಂಬುಲೆನ್ಸ್ ಮೂಲಕ ಆಸ್ಪತ್ರೆಯಲ್ಲಿ ಅಡ್ಮಿಟ್ ಮಾಡಿದ್ದಾರೆ ಎಂದು ಅವರು ಹೇಳಿರುವುದಾಗಿ ವರದಿಯಾಗಿದೆ.



