KSRTC ಬಸ್- ಬೈಕ್ ನಡುವೆ ಅಪಘಾತ, ಬೈಕ್ ಸವಾರನಿಗೆ ಗಾಯ
ಸುಳ್ಯ: ಪೈಚಾರು ಸಮೀಪದ ಆರ್ತಾಜೆ ಬಳಿ ಕೆ ಎಸ್ ಆರ್ ಟಿ ಸಿ ಬಸ್ ಗೆ ದ್ವಿಚಕ್ರ ವಾಹನ ಡಿಕ್ಕಿಯಾದ ಘಟನೆ ಸೋಮವಾರ ಸಂಜೆ ನಡೆದಿದ್ದು ಸವಾರನ ಕಾಲಿಗೆ ಗಂಭೀರ ಗಾಯವಾಗಿದೆ.

ಗಾಯಗೊಂಡ ಸವಾರ ಕಲ್ಲುಗುಂಡಿ ನಿವಾಸಿ ಡಾ.
ಸಮಂತ್ ಎಂದು ತಿಳಿದು ಬಂದಿದ್ದು ಸ್ಥಳೀಯರು ಅವರನ್ನು ಕೂಡಲೇ ಕೆವಿಜಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಚಾಲಕ ಅಪಘಾತ ತಪ್ಪಿಸುವ ಭರದಲ್ಲಿ ಬಸ್ ಸಮೀಪದ ಬರೆಗೆ ಗುದ್ದಿದ್ದು ಪ್ರಯಾಣಿಕರಿಗೂ ಅಲ್ಪ ಸ್ವಲ್ಪ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.