ಈ ಬಾರಿ ಕುಮಾರಸ್ವಾಮಿ ರಾಜ್ಯದ ಮುಖ್ಯಮಂತ್ರಿ ಆಗುವುದು ಪಕ್ಕಾ ದಿವ್ಯಪ್ರಭಾ ಗೌಡ
ಪುತ್ತೂರು ಜೆಡಿಎಸ್ ಪಕ್ಷದ ಅಭ್ಯರ್ಥಿ ದಿವ್ಯ ಪ್ರಭಾ ಗೌಡ ರವರು ಪುತ್ತೂರು ನಗರದ ದರ್ಬೆ ವೃತ್ತ, ಬಸ್ಸು ನಿಲ್ದಾಣ ಬಳಿ ಹಾಗೂ ಹಲವೆಡೆ ಸಾರ್ವಜನಿಕ ಭಾಷಣಗಳನ್ನು ಮಾಡಿ ಭರ್ಜರಿ ಪ್ರಚಾರ ನಡೆಸಿದರು.ಕಾಂಗ್ರೆಸ್ ಪಕ್ಷವು ಗ್ಯಾರಂಟಿ,ಭರವಸೆಗಳು ಪೊಳ್ಳು ಭರವಸೆಗಳು. ಪದವೀಧರ ವಿಧ್ಯಾರ್ಥಿಗಳಿಗೆ ಉದ್ಯೋಗದ ಭರವಸೆ ನೀಡದೆ ಪಾಕೆಟ್ ಮನಿ ನೀಡಿ ಸೋಮರಿಗಳನ್ನಾಗಿ ಮಾಡಲು ಹೊರಟಿದೆ ಎಂದು ಹೇಳಿದರು.

ಈ ಬಾರಿ ಪುತ್ತೂರಿನ ಜನತೆ ಬದಲಾವಣೆಯನ್ನು ಬಯಸುತ್ತಿದ್ದು ಕಾಂಗ್ರೆಸ್ಸ್ ಹಾಗೂ ಬಿಜೆಪಿಯ ಆಡಳಿತ ನೋಡಿ ಜನರು ಬೇಸತ್ತಿದ್ದಾರೆ. ರಾಜ್ಯದಲ್ಲಿ ಕುಮಾರ ಪರ್ವ ಆರಂಭವಾಗಿದೆ ಈ ಬಾರಿ ಕುಮಾರಸ್ವಾಮಿಯವರು ಮುಖ್ಯಮಂತ್ರಿ ಆಗುವುದು ಪಕ್ಕ. ಕುಮಾರಸ್ವಾಮಿಯವರು ನೀಡಿರುವ ಪಂಚರತ್ನ ಯೋಜನೆಯು ಯಾವುದೇ ಧರ್ಮಕ್ಕೆ,ಜಾತಿಗೆ, ವರ್ಗಕ್ಕೆ ಸೀಮಿತವಾಗಿಲ್ಲ ಎಲ್ಲಾ ವರ್ಗದ ಜನರಿಗೆ ಬೇಕಾಗಿರುವ ಯೋಜನೆಗಳು ಈ ಪಂಚರತ್ನ ಯೋಜನೆಯಲ್ಲಿ ಒಳಗೊಂಡಿದೆ. ಹಾಗಾಗಿ ಈ ಬಾರಿ ಬಿಜೆಪಿ ಹಾಗು ಕಾಂಗ್ರೆಸ್ ಪಕ್ಷಕ್ಕೆ ಪರ್ಯಾಯವಾಗಿ ಬಂದಿರುವ ಜೆಡಿಎಸ್ ಪಕ್ಷಕ್ಕೆ ತಮ್ಮ ಅಮೂಲ್ಯವಾದ ಮತವನ್ನ ನೀಡಿ ಗೆಲ್ಲಿಸಿಕೊಟ್ಟಲ್ಲಿ ಪುತ್ತೂರಿನ ಅಭಿವೃದ್ಧಿಯ ಚಿತ್ರಣವೇ ಬದಲಾಗುವಂತೆ ಮಾಡುತ್ತೇನೆ ಎಂಬ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಜಾ ಕೆ ಮಾಧವ ಗೌಡ, ರಾಜ್ಯ ಜೆಡಿಎಸ್ ಕಾರ್ಯದರ್ಶಿ ಇಬ್ರಾಹಿಂ ಗೊಳಿಕಟ್ಟೆ ಮತ್ತಿತರ ಜೆಡಿಎಸ್ ನಾಯಕರು ಉಪಸ್ಥಿತರಿದ್ದರು.