ಕೇರಳದ ಕರಾವಳಿಯಲ್ಲಿ ಸಿಂಗಾಪುರ ಮೂಲದ ಕಂಟೈನರ್ ಹಡಗಿನಲ್ಲಿ ಬೆಂಕಿ ಅವಘಡ
ಮಂಗಳೂರು: ಕೇರಳದ ಕರಾವಳಿಯಲ್ಲಿ ಜೂ.9ರಂದು ಬೆಳಗ್ಗೆ ಸಿಂಗಾಪುರ ಮೂಲದ ಕಂಟೈನರ್ ಹಡಗಿನಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಘಟನೆಯಲ್ಲಿ ಗಾಯಗೊಂಡವರನ್ನು ಮಂಗಳೂರಿಗೆ ಕರೆತಂದು ಚಿಕಿತ್ಸೆ ನೀಡಲಾಗುವುದು ಎಂದು ತಿಳಿದು ಬಂದಿದೆ.

ಬೆಂಕಿಯಿಂದ ಹೊತ್ತಿ ಉರಿಯುತ್ತಿದ್ದ ಎಂ.ವಿ ವಾನ್ ಹೈ 503 ಹಡಗಿನಿಂದ 18 ಸಿಬ್ಬಂದಿಯನ್ನು ಭಾರತೀಯ ನೌಕಪಡೆ ಹಾಗೂ ಕರಾವಳಿ ರಕ್ಷಣಾ ಪಡೆ ಸಿಬ್ಬಂದಿ ರಕ್ಷಿಸಿದ್ದಾರೆ.
ಚೀನಾದ ಎಂಟು ಮಂದಿ, ತೈವಾನ್‌ನ ನಾಲ್ಕು ಮಂದಿ, ಮಯನ್ಮಾರಿನ ನಾಲ್ಕು ಮಂದಿ ಮತ್ತು ಇಂಡೋನೇಷ್ಯಾದ ಇಬ್ಬರು ಗಾಯಾಗೊಂಡವರು.
ರಕ್ಷಣೆಯಾಗಿರುವ 18 ಮಂದಿ ಪಣಂಬೂರು ಬಂದರು ತಲುಪಿದ್ದು, ಬಳಿಕ ಎ.ಜೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುವುದು. ಎ.ಜೆ ಆಸ್ಪತ್ರೆಯಲ್ಲಿ ಎಲ್ಲಾ ವೈದ್ಯಕೀಯ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.