ಫಾಳಿಲಾ- ಫಳೀಲಾ ಈವನ್ ಸೆಮಿಸ್ಟರ್ ಪರೀಕ್ಷೆ : ಮೌಂಟನ್ ವ್ಯೂ ಅಸ್ವಾಲಿಹಾ ವುಮೆನ್ಸ್ ಕಾಲೇಜ್ ಗೆ ಶೇ.100 ಫಲಿತಾಂಶ, 6 ವಿದ್ಯಾರ್ಥಿನಿಯರಿಗೆ ಡಿಸ್ಟಿಂಕ್ಷನ್
ಪುತ್ತೂರು : ‘ಸಮಸ್ತ’ ದ ಅದೀನದ ಫಾಳಿಲಾ, ಫಳೀಲಾ ವುಮೆನ್ಸ್ ಕಾಲೇಜ್ ಗಳ ಈವನ್ ಸೆಮಿಸ್ಟರ್ ಪರೀಕ್ಷೆಯಲ್ಲಿ ಸಾಲ್ಮರ ಮೌಂಟನ್ ವ್ಯೂ ಸಮೂಹ ಶಿಕ್ಷಣ ಸಂಸ್ಥೆಗಳ ಅಧೀನದ ಅಸ್ವಾಲಿಹಾ ವುಮೆನ್ಸ್ ಕಾಲೇಜ್ ನಿಂದ ಪರೀಕ್ಷೆ ಬರೆದ ಎಲ್ಲಾ ವಿದ್ಯಾರ್ಥಿನಿಯರು ಉತ್ತೀರ್ಣರಾಗಿ ಶೇ.100 ಫಲಿತಾಂಶ ಬಂದಿದ್ದು ಒಟ್ಟು ಆರು ವಿದ್ಯಾರ್ಥಿನಿಯರು ಡಿಸ್ಟಿಂಕ್ಷನ್ ಪಡೆದಿದ್ದಾರೆ.

ಎಪ್ರಿಲ್ ತಿಂಗಳ 21 ರಿಂದ 25 ರ ವರೆಗೆ ನಡೆದ ಈ ಪರೀಕ್ಷೆಯಲ್ಲಿ ಅಸ್ವಾಲಿಹಾ ವುಮೆನ್ಸ್ ಕಾಲೇಜ್ ನಿಂದ ಫಾಳಿಲಾ ಪ್ರಥಮ ವರ್ಷದಿಂದ 11 ಮತ್ತು ದ್ವಿತೀಯ ವರ್ಷದಿಂದ 17 ವಿದ್ಯಾರ್ಥಿನಿಯರು ಒಟ್ಟು 28 ವಿದ್ಯಾರ್ಥಿನಿಯರು ಪರೀಕ್ಷೆ ಬರೆದಿದ್ದರು.
ಪ್ರಥಮ ವರ್ಷದ ವಿದ್ಯಾರ್ಥಿನಿಯರಾದ ಫಾತಿಮತ್ ಝುಹ್ರ , ಜಝೀಲಾ, ಝಕಿಯ್ಯಾ ಮತ್ತು ಶಮ್ನಾ ಡಿಸ್ಟಿಂಕ್ಷನ್ ಪಡೆದರೆ ಉಳಿದ 5 ವಿದ್ಯಾರ್ಥಿನಿಯರು ಪ್ರಥಮ ಶ್ರೇಣಿ ಮತ್ತು ಇಬ್ಬರು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ದ್ವಿತೀಯ ವರ್ಷದ ವಿದ್ಯಾರ್ಥಿನಿಯರಾದ ರಈಸಾ ಮತ್ತು ಮುಹ್ಸಿನಾ ಡಿಸ್ಟಿಂಕ್ಷನ್ ಪಡೆದರೆ 3 ವಿದ್ಯಾರ್ಥಿನಿಯರು ಪ್ರಥಮ ಶ್ರೇಣಿಯಲ್ಲಿ ಹಾಗೂ ಉಳಿದ ವಿದ್ಯಾರ್ಥಿನಿಯರು ದ್ವಿತೀಯ ಶ್ರೇಣಿಯಲ್ಲೂ ಉತ್ತೀರ್ಣರಾಗಿದ್ದಾರೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.