ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಅರ್ಜಿ ಆಹ್ವಾನ
ಪುತ್ತೂರು: ಇಹ್ಸಾನ್ ಫೌಂಡೇಶನ್ ಪುತ್ತೂರು (ರಿ) ಇದರ ವತಿಯಿಂದ 2026 ರ ಜನವರಿ ತಿಂಗಳಲ್ಲಿ ಹಮ್ಮಿಕೊಂಡಿರುವ 8ನೇ ವರ್ಷದ “ಸರಳ ಸಾಮೂಹಿಕ ವಿವಾಹ” ಕಾರ್ಯಕ್ರಮಕ್ಕೆ ಆಸಕ್ತ ವಧುವಿನ ಕುಟುಂಬಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಅನಾಥ, ವಿಕಲಚೇತನ, ಆರ್ಥಿಕ ಹಿಂದುಳಿಕೆ ಹಾಗೂ ಮದುವೆಯ ವಯಸ್ಸು ಮೀರಿರುವ ಪುತ್ತೂರು ತಾಲೂಕು ಆಸುಪಾಸಿನ ವಧುವಿಗೆ ಮೊದಲ ಆಧ್ಯತೆ ನೀಡಲಾಗುವುದು. ಪುತ್ತೂರು ತಾಲೂಕಿನ ಹತ್ತಿರದ ತಾಲೂಕಿನ ಅರ್ಜಿಗಳನ್ನೂ ಸ್ವೀಕರಿಸಲಾಗುವುದು. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಮತ್ತು ಅರ್ಜಿ ಸಲ್ಲಿಸಲು ಈ ಕೆಳಗಿನ ಮೊಬೈಲ್ ಸಂಖ್ಯೆಯಲ್ಲಿ ಸಂಪರ್ಕಿಸಬಹುದು(9481958294, 8050508005, 9448252948, 9448696499) ಎಂದು
ಇಹ್ಸಾನ್ ಫೌಂಡೇಶನ್ ಸಂಸ್ಥೆಯ ಪ್ರಕಟನೆಯಲ್ಲಿ ತಿಳಿಸಿದ್ದಾರೆ.