ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ
ಉಚಿತ ಶಿಕ್ಷಣ
ಪುತ್ತೂರು: ಗುಣಮಟ್ಟದ ಶಿಕ್ಷಣದಲ್ಲಿ ಹೆಸರುಗಳಿಸಿದ ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜು ಇದೀಗ ಎಸ್ ಎಸ್ ಎಲ್ ಸಿ ಯಲ್ಲಿ 95% ಅಥವಾ ಹೆಚ್ಚಿನ ಅಂಕ ಗಳಿಸಿದ ವಿದ್ಯಾರ್ಥಿನಿಯರಿಗೆ ಉಚಿತ ದಾಖಲಾತಿಯನ್ನು ನೀಡುತ್ತಿದೆ.

ಸಂಸ್ಥೆಯು ಬೆಳ್ಳಿ ಹಬ್ಬದ ಸಂಭ್ರಮದಲ್ಲಿ ಈ ವರ್ಷದ ದಾಖಲಾತಿಯಲ್ಲಿ ಆಕರ್ಷಕ ಕೊಡುಗೆಗಳನ್ನು ನೀಡಿದ್ದು 90% ಗಿಂತ ಮೇಲಿನ ವಿದ್ಯಾರ್ಥಿನಿಯರಿಗೆ ಶೇಕಡಾ 30% ರಿಯಾಯಿತಿಯನ್ನೂ ನೀಡುತ್ತಿದೆ.
ಅಲ್ಲದೆ ರ್ಯಾಂಕ್ ವಿದ್ಯಾರ್ಥಿನಿಯರಿಗೆ ದಾಖಲಾತಿ ಸಹಿತ ಎಲ್ಲವನ್ನೂ ಉಚಿತವಾಗಿ ನೀಡಲಾಗುತ್ತದೆ.
ಇದೀಗ ವಿಜ್ಞಾನ ವಿಭಾಗದ ದಾಖಲಾತಿಯು ಮುಕ್ತಾಯದ ಹಂತದಲ್ಲಿದ್ದು ವಾಣಿಜ್ಯ ಮತ್ತು ಕಲಾ ವಿಭಾಗಗಳು ಅತ್ಯಂತ ವೇಗದಲ್ಲಿ ದಾಖಲಾತಿ ಪಡೆಯುತ್ತಿದೆ.
ಪದವಿ ವಿಭಾಗವಾದ ಬಿ .ಎ ಮತ್ತು ಬಿ.ಕಾಂ ತರಗತಿಗಳಿಗೂ ದಾಖಲಾತಿ ಹೆಚ್ಚಿನ ಪ್ರಮಾಣದಲ್ಲಿದ್ದು ಈ ಶೈಕ್ಷಣಿಕ ವರ್ಷದಿಂದ ಆರಂಭಗೊಳ್ಳುವ ಎಲೈಡ್ ಹೆಲ್ತ್ ಸಯನ್ಸ್/ ಪ್ಯಾರಾಮೆಡಿಕಲ್ ಕೋರ್ಸ್ ಗೂ ಕೆಲವೇ ಕೆಲವು ಸೀಟುಗಳು ಬಾಕಿ ಉಳಿದಿದೆ.ಶರೀಅತ್ ತರಗತಿಗಳೊಂದಿಗೆ ನೀಡಲ್ಪಡುವ ಈ ಆರೋಗ್ಯ ವಿಜ್ಞಾನ ಕೋರ್ಸ್ ಮೆಡಿಕಲ್ ಆಪರೇಷನ್ ಟೆಕ್ನಾಲಜಿ ಮತ್ತು ಮೆಡಿಕಲ್ ಲ್ಯಾಬೋರೇಟರಿ ಟೆಕ್ನಾಲಜಿಯಲ್ಲಿ ನಡೆಯಲಿದೆ. ಆಸಕ್ತ ವಿದ್ಯಾರ್ಥಿನಿಯರು ತಮ್ಮ ಪೋಷಕರೊಂದಿಗೆ ಆಗಿಮಿಸಿ ಕೂಡಲೆ ದಾಖಲಾತಿ ಮಾಡಿಕೊಳ್ಳಲು ಮೀಡಿಯಾ ಮರ್ಕಝ್ ಕುಂಬ್ರ ಪ್ರಕಟಣೆಯಲ್ಲಿ ತಿಳಿಸಿದೆ.