ಪಾಟ್ರಕೋಡಿ ಜುಮಾ ಮಸೀದಿಯಲ್ಲಿ ಸಂಭ್ರಮದ ಈದ್ ಆಚರಣೆ
ಕೆದಿಲ ಪಾಟ್ರಕೋಡಿ ಜುಮ್ಮಾ ಮಸೀದಿಯಲ್ಲಿ ಸಂಭ್ರಮದಿಂದ ರಂಜಾನ್ ಈದ್ ಹಬ್ಬವನ್ನು ಆಚರಿಸಲಾಯಿತು.

ಜುಮ್ಮಾ ಮಸೀದಿಯ ಖತೀಬರಾದ ಖಲಂದರ್ ಶಾಫಿ ಬಾಖವಿ ಅಲ್ ಮನಾನಿ ರವರ ನೇತೃತ್ವದಲ್ಲಿ ಈದ್ ನಮಾಜ್ ನಿರ್ವಹಿಸಲಾಯಿತು.
ದ್ವೇಷ ಅಸೂಯೆನು ತ್ಯಜಿಸಿ ಇಸ್ಲಾಂ ಧರ್ಮದ ನೀತಿ ನಿಯಮಗಳ ಮೂಲಕ ಜೀವಿಸುವುದು ಮಾತ್ರವಲ್ಲದೇ ಅನ್ಯ ಧರ್ಮೀಯರ ಜೊತೆಯಲ್ಲಿ ಇಸ್ಲಾಂ ಚೌಕಟ್ಟಿನಲ್ಲಿ ಸಹೊದರತೆ ಸಹಕಾರ ಸಾಮರಸ್ಯದೊಂದಿಗೆ ಇರುವಂತೆ ಜುಮ್ಮಾ ಮಸೀದಿಯ ಖತೀಬರು ಈದ್ ಸಂದೇಶ ನೀಡಿದರು. ನಂತರ ನಡೆದ ಸಾಮೂಹಿಕ ದುವಾ ಪ್ರಾಥನೆಗೈಲಾಯಿತು.
ಜಮಾಹತ್ ಕಮಿಟಿಯ ಅಧ್ಯಕ್ಷರಾದ ಉಮ್ಮರ್ ಹಾಜಿ ಕರಿಮಜಲು ಹಾಗು ಗೌಸಿಯ ಯಂಗ್ ಮನ್ಸ್ ಅಸೋಸಿಯೇಷನ್ ಅದ್ಯಕ್ಷರಾದ ಅಝಾರ್ ಪಾಟ್ರಕೋಡಿರವರು ಊರಿನ ಸರ್ವರಿಗೂ ಈದ್ ಶುಭಾಶಯವನ್ನು ತಿಳಿಸಿದರು.
✍️ ಅಬ್ದುಲ್ ಖಾದರ್ ಪಾಟ್ರಕೋಡಿ