ಮಾಜಿ ಸಚಿವ ವಿನಯಕುಮಾರ್ ಸೊರಕೆಯವರ ತಾಯಿ ಸುನೀತಿ ನಿಧನ
ಪುತ್ತೂರು: ಸರ್ವೆ ಗ್ರಾಮದ ಸೊರಕೆ ದಿ.ಅಚ್ಚುತ್ತ ಪೂಜಾರಿ ಸೊರಕೆಯವರ ಪತ್ನಿ ಸುನೀತಿ(92.ವ)
ಅವರು ಅಲ್ಪ ಕಾಲದ ಅಸೌಖ್ಯದಿಂದ ಜು.8ರಂದು ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಮೃತರು ಪುತ್ರರಾದ ಅಶೋಕ್ ಕುಮಾರ್ ಸೊರಕೆ, ಮಾಜಿ ನಗರಾಭಿವೃದ್ಧಿ ಸಚಿವ ವಿನಯ ಕುಮಾರ್ ಸೊರಕೆ,
ಮುಂಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸುರೇಶ್ ಕುಮಾರ್ ಸೊರಕೆ, ಪುತ್ರಿಯರಾದ ಶಶಿಕಲಾ, ಶರತ್ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ವಿನಯಕುಮಾರ್ ಸೊರಕೆ ಅವರು ಬೆಂಗಳೂರಿನಲ್ಲಿದ್ದು ಅವರು ಬಂದ ಬಳಿಕ ಮೃತರ ಅಂತ್ಯಕ್ರಿಯ ನೆರವೇರಲಿದೆ ಎಂದು ತಿಳಿದು ಬಂದಿದೆ.



