ವೈವಾಹಿಕ ಜೀವನಕ್ಕೆ ಕಾಲಿರಿಸಿದ ಖ್ಯಾತ ನಿರೂಪಕಿ ಅನುಶ್ರೀ
ಕನ್ನಡದ ಖ್ಯಾತ ನಿರೂಪಕಿ ಅನುಶ್ರೀ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ. ಕೊಡಗು ಮೂಲದ ಉದ್ಯಮಿ ರೋಷನ್ ಜೊತೆ ಇಂದು ವಿವಾಹವಾಗಿದ್ದಾರೆ. ಅನುಶ್ರೀ ಮದುವೆ ಬೆಂಗಳೂರಿನ ಹೊರವಲಯದಲ್ಲಿರುವ ಕಗ್ಗಲಿಪುರದಲ್ಲಿ ನಡೆದಿದೆ.

ನಿರೂಪಕಿ ಅನುಶ್ರೀ ಹಾಗೂ ರೋಷನ್ ಅದ್ಧೂರಿ ಮದುವೆಗೆ ಹಲವು ಸೆಲೆಬ್ರಿಟಿಗಳು ಬಂದು ಶುಭ ಹಾರೈಸಿದ್ದಾರೆ. ಶಾಲಾ ದಿನಗಳಲ್ಲಿ ಕಷ್ಟದಲ್ಲಿ ಜೀವನ ಸಾಗಿಸಿ ಬಳಿಕ ಬೆಂಗಳೂರಿಗೆ ಬಂದು ಚಿತ್ರರಂಗ, ಕನ್ನಡ ಕಿರುತೆರೆಯಲ್ಲಿ ಕಷ್ಟಪಟ್ಟು ವೃತ್ತಿ ಕಂಡುಕೊಂಡು ಇಂದು ಸ್ಟಾರ್ ನಿರೂಪಕಿಯಾಗಿ ಬೆಳೆದು ನಿಂತಿರುವ ಅನುಶ್ರೀ ವೈಯಕ್ತಿಕ ಜೀವನದಲ್ಲಿ ತಮ್ಮ ತಾಯಿ ಮತ್ತು ತಮ್ಮನ ಜವಾಬ್ದಾರಿ ವಹಿಸಿಕೊಂಡಿದ್ದರು. ಮದುವೆಯಾಗುವ ವೇಳೆ ಅನುಶ್ರೀ ಭಾವುಕರಾಗಿದ್ದರು.



