ಕರಾವಳಿಕ್ರೈಂ

ಅಪ್ರಾಪ್ತ ಬಾಲಕಿಯ ಅತ್ಯಾಚಾರ: ಆರೋಪಿ ಅರೆಸ್ಟ್

ಪುತ್ತೂರು: ಮನೆಯಲ್ಲಿ ಬಾಲಕಿ ಒಬ್ಬಳೇ ಇದ್ದ ವೇಳೆ ಮನೆಗೆ ಪ್ರವೇಶಿಸಿ ಬಾಲಕಿಯನ್ನು ಅತ್ಯಾಚಾರ ನಡೆಸಿದ ಯುವಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ಅಪ್ರಾಪ್ತ ಪ್ರಾಯದ ಸಂತ್ರಸ್ತೆ ಬಾಲಕಿಯು ಕಾಲೇಜು ವಿದ್ಯಾರ್ಥಿನಿಯಾಗಿದ್ದು, 2024 ನೇ ವರ್ಷದ ಆಗಸ್ಟ್‌ ತಿಂಗಳಿನಲ್ಲಿ ಕಾಲೇಜಿಗೆ ರಜೆಯಿದ್ದುದರಿಂದ ಮನೆಯಲ್ಲಿ ಒಬ್ಬಳೇ ಇದ್ದಾಗ ಅಟೋ ಚಾಲಕ ಮಂಜುನಾಥ್‌ ಕಟ್ಟತ್ತಡ್ಕ ಎಂಬಾತನು ಬಾಲಕಿಯ ಮನೆಗೆ ನೀರು ಕೇಳುವ ನೆಪದಲ್ಲಿ ಬಂದು, ಬಾಲಕಿಯ ಇಚ್ಚೆಗೆ ವಿರುದ್ಧವಾಗಿ ಬಲವಂತವಾಗಿ ಅತ್ಯಾಚಾರ ಎಸಗಿರುತ್ತಾನೆ. ಬಳಿಕ ಈ ವಿಚಾರವನ್ನು ಯಾರಲ್ಲಿಯೂ ಹೇಳದಂತೆ ಬೆದರಿಕೆ ಒಡ್ಡಿ ಹೋಗಿರುತ್ತಾನೆ. ಸದ್ರಿ ಘಟನೆಯ ಬಳಿಕವೂ ಅರೋಪಿತನು ಬಾಲಕಿಯನ್ನು ‌ಬೆದರಿಸಿ ಇದೇ ರೀತಿ 7-8 ಬಾರಿ ದೈಹಿಕ ಸಂಪರ್ಕ ಮಾಡಿದ್ದು, 2024 ರ ಅಕ್ಟೋಬರ್‌ ತಿಂಗಳಲ್ಲಿ ಕೊನೆ ಬಾರಿ ದೈಹಿಕ ಸಂಪರ್ಕ ಮಾಡಿರುತ್ತಾನೆ. ಆ ಬಳಿಕ ಕೆಲ ಸಮಯದಿಂದ ಬಾಲಕಿಯ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ, ಚಿಕಿತ್ಸೆಗಾಗಿ ಬಾಲಕಿಯು ದಿನಾಂಕ 05-04-2025 ರಂದು ಆಕೆಯ ತಾಯಿಯೊಂದಿಗೆ ಪುತ್ತೂರು ಸಾರ್ವಜನಿಕ ಆಸ್ಪತ್ರೆಗೆ ಹೋದಾಗ ಆಕೆಯು ಗರ್ಭಿಣಿಯಾಗಿರುವುದು ತಿಳಿದು ಬಂದಿದೆ.

ಅಪ್ರಾಪ್ತೆ ಸಂತ್ರಸ್ತೆ ಬಾಲಕಿಯನ್ನು ಬೆದರಿಸಿ ಅತ್ಯಾಚಾರ ಎಸಗಿರುವ ಹಿನ್ನೆಲೆಯಲ್ಲಿ ಆರೋಪಿತನ ವಿರುದ್ಧ ಪುತ್ತೂರು ಮಹಿಳಾ ಪೊಲೀಸ್‌ ಠಾಣೆಯಲ್ಲಿ ಕಲಂ:  64(2) (m), 352(3) BNS 2023 ಮತ್ತು ಕಲಂ 5(l) ಜೊತೆಗೆ 6 POCSO Act 2012 ರಂತೆ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!