ಅಖಿಲ ಭಾರತ ಬ್ಯಾರಿ ಪರಿಷತ್ ಅಧ್ಯಕ್ಷರಾಗಿ ಆಯ್ಕೆಯಾದ ಖಾಲಿದ್’ರವರಿಗೆ ಸುಳ್ಯದ ಮುಸ್ಲಿಂ ಮುಖಂಡರಿಂದ ಸನ್ಮಾನ
ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಬ್ಯಾರಿ ಪರಿಷತ್ ಮಹಾಸಭೆಯಲ್ಲಿ ಅಖಿಲ ಬ್ಯಾರಿ ಪರಿಷತ್ ಅಧ್ಯಕ್ಷರಾಗಿ ಆಯ್ಕೆಯಾದ ಸುಳ್ಯ ಜನತಾ ಗ್ರೂಪ್ಸ್ ಕುಟುಂಬ ಸದಸ್ಯರಾದ ಖಾಲಿದ್ ಉಜಿರೆಯವರನ್ನು ಸುಳ್ಯದ ಮುಸ್ಲಿಂ ಮುಖಂಡರು ಮಂಗಳೂರಿನಲ್ಲಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ದ ಕ ಜಿಲ್ಲಾ ಮತ್ತು ಉಡುಪಿ ಜಿಲ್ಲಾ ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಉಪಾಧ್ಯಕ್ಷ ಕೆ. ಎಂ. ಮುಸ್ತಫ ಜನತಾ, ಸುಳ್ಯ ನಗರ ಪಂಚಾಯತ್ ಸದಸ್ಯ ಕೆ ಎಸ್ ಉಮ್ಮರ್, ಕೆಎಂಸಿಸಿ ಜಿಲ್ಲಾ ಖಜಾಂಜಿ ಇಬ್ರಾಹಿಂ ಕತ್ತಾರ್, ಅಬ್ದುಲ್ ರೆಹಮಾನ್ ಬಿಳಿಯಾರ್, ಅಖಿಲ ಭಾರತ ಬ್ಯಾರಿ ಪರಿಷತ್ ಸಲಹಾ ಸಮಿತಿಯ ಯೂಸುಫ್ ವೊಕ್ತರ್, ಕೋಶಾಧಿಕಾರಿ ನಿಸಾರ್ ಫಕೀರ್ ಮಹಮ್ಮದ್ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.