ಕರಾವಳಿ

ಕುಡಿಯುವ ನೀರಿಗೆ ತೊಂದರೆಯಾದಲ್ಲಿ ಗ್ರಾ.ಪಂ ಪಿಡಿಒ ಗಮನಕ್ಕೆ ತನ್ನಿ, ವ್ಯವಸ್ಥೆಯಾಗಿಲ್ಲವಾದರೆ ನನಗೆ ಕರೆ ಮಾಡಿ : ಶಾಸಕ ಅಶೋಕ್ ರೈ


ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಯಾವುದೇ ಗ್ರಾಮದಲ್ಲಿ ಕುಡಿಯುವ ನೀರಿಗೆ ತೊಂದರೆಯಾದಲ್ಲಿ ಗ್ರಾಪಂ ಪಿಡಿಒ ಅವರನ್ನು ಸಂಪರ್ಕಿಸಿ ಅವರ ಗಮನಕ್ಕೆ ತನ್ನಿ ಆ ಬಳಿಕವೂ ವ್ಯವಸ್ಥೆಯಾಗದೇ ಇದ್ದಲ್ಲಿ ನನಗೆ ಕರೆ ಮಾಡಿ ತಿಳಿಸಿ ಸಮಸ್ಯೆಯನ್ನು ಪರಿಹರಿಸಲಾಗುವುದು ಎಂದು ಶಾಸಕ ಅಶೋಕ್ ರೈ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.


ಎಪ್ರಿಲ್ ಬಳಿಕ ಕೆಲವು ಕಡೆಗಳಲ್ಲಿ ಕುಡಿಯುವ ನೀರಿನ ಅಭಾವ ಉಂಟಾಗುತ್ತದೆ. ಕಳೆದ ಬಾರಿಯೂ ಸಮಸ್ಯೆ ಉಂಟಾಗಿತ್ತು. ಯಾರಿಗೂ ಕುಡಿಯುವ ನೀರಿನ ತೊಂದರೆಯಾಗದಂತೆ ವ್ಯವಸ್ಥೆ ಮಾಡುವಂತೆ ಈಗಾಗಲೇ ಪಿಡಿಒಗಳಿಗೆ‌ ಸೂಚನೆ ನೀಡಲಾಗಿದೆ. ಕೆಲವು ಕಡೆ ಕೊಳವೆ ಬಾವಿಯಲ್ಲಿ ನೀರು ಇಲ್ಲದೆ, ಪಂಪ್ ಕೆಟ್ಟು ಹೋದ ಕಾರಣ ನೀರಿನ ಸಮಸ್ಯೆ ಉಂಟಾಗಿದೆ ಎಂಬುದು ನನ್ನ ಗಮನಕ್ಕೆ ಬಂದಿದೆ. ಸಮಸ್ಯೆ ಪರಿಹಾರಕ್ಕೆ ಯತ್ನದ ಭಾಗವಾಗಿ ಎಲ್ಲೆಲ್ಲಿ ಸಮಸ್ಯೆ ಇದೆಯೋ ಅಲ್ಲೆಲ್ಲಾ ನಮ್ಮ ವಲಯ,ಹಾಗೂ ಬೂತ್ ಅಧ್ಯಕ್ಷರುಗಳು ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ನೀರಿನ ಸಮಸ್ಯೆಗೆ ಗ್ರಾಪಂ ಪರಿಹಾರ ನೀಡಲು ಸಾಧ್ಯವಾಗದೇ ಇದ್ದಲ್ಲಿ ನನ್ನ ಕಚೇರಿ ಮೂಲಕ ಟ್ಯಾಂಕರ್ ಮೂಲಕ ನೀರಿನ‌ವ್ಯವಸ್ಥೆ ಮಾಡಲಾಗುವುದು ಎಂದು ಶಾಸಕರು ತಿಳಿಸಿದ್ದಾರೆ.
ನೀರಿನ‌ ತೊಂದರೆ ಕಂಡು ಬಂದಲ್ಲಿ ಶಾಸಕರ ಮೊಬೈಲ್ ಸಂಖ್ಯೆ 9448380969 ಗೆ ಕರೆ ಮಾಡಿ.
ಪುತ್ತೂರು ಬ್ಲಾಕ್ ಗೆ ಸಂಬಂದಿಸಿದ ಗ್ರಾಪಂಗಳ ಸಾರ್ವಜನಿಕರು ಕಚೇರಿ ಸಿಬಂದಿ ಜುನೈದ್ : 8971462232, ವಿಟ್ಲ ಮತ್ತು ಉಪ್ಪಿನಂಗಡಿ ಬ್ಲಾಕ್ ವ್ಯಾಪ್ತಿಯ ಗ್ರಾಮಸ್ಥರು ಕಚೇರೊ ಸಿಬಂದಿ ಲಿಂಗಪ್ಪ : 9449663719 ಕರೆ ಮಾಡಿ ತಿಳಿಸಬೇಕಾಗಿ ವಿನಂತಿ

Leave a Reply

Your email address will not be published. Required fields are marked *

error: Content is protected !!