ರಫೀಕ್ ದರ್ಬೆ ಹೆಸರಿನಲ್ಲಿ ನಕಲಿ ಇನ್’ಸ್ಟಾಗ್ರಾಂ ಖಾತೆ ಸೃಷ್ಟಿಸಿ ಹಣಕ್ಕಾಗಿ ಬೇಡಿಕೆ ಇಟ್ಟ ಕಿಡಿಗೇಡಿಗಳು
ಪುತ್ತೂರು ಸರಕಾರಿ ಆಸ್ಪತ್ರೆಯ ರಕ್ಷಾ ಸಮಿತಿಯ ಮಾಜಿ ಸದಸ್ಯ, ಉದ್ಯಮಿ ರಫೀಕ್ ದರ್ಬೆ ಅವರ ಹೆಸರಿನಲ್ಲಿ ಇನ್’ಸ್ಟಾಗ್ರಾಂ ಖಾತೆ ತೆರೆದಿರುವ ಕಿಡಿಗೇಡಿಗಳು ಹಲವರಲ್ಲಿ ಹಣಕ್ಕಾಗಿ ಬೇಡಿಕೆ ಇಟ್ಟಿರುವ ಘಟನೆ ನಡೆದಿದೆ.

ರಫೀಕ್ ದರ್ಬೆ ಅವರ ಹೆಸರಿನಲ್ಲಿ ಹೊಸ ಖಾತೆ ಸೃಷ್ಟಿಸಿ ರಫೀಕ್ ದರ್ಬೆ ಅವರ ಫೋಟೋ ಅಳವಡಿಸಿರುವ ಕಿಡಿಗೇಡಿಗಳು ಹಲವರಲ್ಲಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದು ಆ ಪೈಕಿ ರಫೀಕ್ ದರ್ಬೆ ಅವರ ಆತ್ಮೀಯರು ಕರೆ ಮಾಡಿ ವಿಚಾರಿಸಿದಾಗ ರಫೀಕ್ ದರ್ಬೆ ಅವರಿಗೆ ವಿಚಾರ ತಿಳಿದಿದೆ. ನನ್ನ ಹೆಸರಿನಲ್ಲಿ ಹಣ ಕೇಳಿದರೆ ಯಾರೂ ನೀಡಬೇಡಿ ಎಂದು ರಫೀಕ್ ದರ್ಬೆ ಮನವಿ ಮಾಡಿದ್ದು ನಕಲಿ ಖಾತೆ ಸೃಷ್ಟಿಸಿರುವ ಕಿಡಿಗೇಡಿಗಳ ವಿರುದ್ಧ ಸೈಬರ್ ಕ್ರೈಮ್ ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.
