ಕಡಬ: ಮಲಗಿದಲ್ಲೇ ಎರಡೂವರೆ ವರ್ಷದ ಮಗು ಮೃತ್ಯು!
ನೆಲ್ಯಾಡಿ: ಎರಡೂವರೇ ವರ್ಷದ ಮಗುವೊಂದು ಮಲಗಿದಲ್ಲೇ ಮೃತಪಟ್ಟ ದಾರುಣ ಘಟನೆ ಮಾ.25ರಂದು ನಡೆದಿರುವ ಬಗ್ಗೆ ವರದಿಯಾಗಿದೆ.

ಕಡಬ ತಾಲೂಕಿನ ಕೊಣಾಜೆಯಲ್ಲಿ ತೋಟದ ಕೆಲಸ ಮಾಡುತ್ತಿದ್ದ ಉತ್ತರ ಪ್ರದೇಶ ಮೂಲದ ರಾಜಾಸಿಂಗ್ ಹಾಗೂ ದಿವ್ಯಾಂಶಿ ಸಿಂಗ್ ದಂಪತಿ ಪುತ್ರ, ಎರಡೂವರೇ ವರ್ಷದ ರುದ್ರಪ್ರತಾಪ್ ಸಿಂಗ್ ಮೃತಪಟ್ಟ ಮಗು. ರಾಜಾಸಿಂಗ್ ಹಾಗೂ ದಿವ್ಯಾಂಶಿ ಸಿಂಗ್ ದಂಪತಿ ಕೊಣಾಜೆ ಗ್ರಾಮದ ಮಾಲ ಎಂಬಲ್ಲಿ ತೋಟದ ಕೆಲಸ ಮಾಡಿಕೊಂಡಿದ್ದು, ಮಾ.25ರಂದು ಬೆಳಿಗ್ಗೆ ದಿವ್ಯಾಂಶಿ ಅವರು ಮಗುವಿಗೆ ಊಟ ಕೊಟ್ಟು ಬಳಿಕ ಮಗುವಿಗೆ ನಿದ್ದೆ ಬಂದ ಕಾರಣ ಮಗುವನ್ನು ಮಲಗಿಸಿದ್ದು, ಮಧ್ಯಾಹ್ನ 1 ಗಂಟೆಗೆ ಹೋಗಿ ಮಗುವನ್ನು ಎಬ್ಬಿಸಲು ನೋಡಿದಾಗ ಮಗು ಏಳದೇ ಇದ್ದುದರಿಂದ ಗಾಬರಿಗೊಂಡು ತೋಟದ ಮಾಲಕರಿಗೆ ಫೋನ್ ಮಾಡಿ ವಿಚಾರ ತಿಳಿಸಿದ್ದು, ಬಳಿಕ ಅವರ ಕಾರಿನಲ್ಲಿ ಮಗುವನ್ನು ಕಡಬ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿ, ಅಲ್ಲಿಂದ ಕಡಬ ಆಸ್ಪತ್ರೆಗೆ ಕೊಂಡುಹೋಗುವಂತೆ ತಿಳಿಸಿದ್ದಾರೆ. ಕೂಡಲೇ ಕಡಬ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿಯ ವೈದ್ಯರು ಮಗುವನ್ನು ಪರೀಕ್ಷಿಸಿ ಮಗು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಮಗು ಮೃತಪಡಲು ಕಾರಣ ತಿಳಿದು ಬಂದಿಲ್ಲ.