ಕಡಲ ತೀರದಲ್ಲಿ ರಾಶಿ ಬಿದ್ದ ತಿಮಿಂಗಿಲಗಳು
ಕಡಲ ತೀರದ ಬಳಿ 150 ತಿಮಿಂಗಿಲಗಳು ತೇಲಿ ಬಂದು ತೀರಕ್ಕೆ ಬಿದ್ದಿರುವ ಘಟನೆ ಆಸ್ಟ್ರೇಲಿಯಾದ ಮೇಲ್ಬೋರ್ನ್ ತಾಸ್‌ಮಾನಿಯಾ ರಾಜ್ಯದ ಅರ್ಥರ್ ಸಮುದ್ರದಲ್ಲಿ ನಡೆದಿದೆ.

ತೀರಕ್ಕೆ ಬಂದು ಬಿದ್ದಿರುವ 150 ತಿಮಿಂಗಿಲಗಳ ಪೈಕಿ 136 ತಿಮಿಂಗಿಲಗಳು ಇನ್ನೂ ಜೀವಂತವಾಗಿದ್ದು, ಉಳಿದವು ಸಾವನ್ನಪ್ಪಿದೆ. ಇನ್ನು ಬದುಕಿರುವ ಕೆಲವು ತಿಮಿಂಗಿಲಗಳು ಸಾವು-ಬದುಕಿನ ನಡುವೆ ಹೋರಾಡುತ್ತಿವೆ ಎಂದು ಆಸ್ಟ್ರೇಲಿಯಾದ ಪರಿಸರ ಸಚಿವಾಲಯದ ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.
ಇಷ್ಟೊಂದು ಪ್ರಮಾಣದಲ್ಲಿ ತಿಮಿಂಗಿಲಗಳು ಸಮುದ್ರದ ತೀರಕ್ಕೆ ಬಂದು ಬಿದ್ದಿರುವುದಕ್ಕೆ ಕಾರಣ ಬಹಿರಂಗವಾಗಿಲ್ಲ. ಆಳ ಸಮುದ್ರದಲ್ಲಿ ಯಾವುದೋ ದೊಡ್ಡ ಶಬ್ದ, ಶತ್ರುಗಳ ದಾಳಿ, ಹವಾಮಾನ ವೈಪರಿತ್ಯ ಅಥವಾ ಅನಾರೋಗ್ಯದಿಂದ ಬಂದು ಬಿದ್ದಿರಬಹುದು ಎಂದು ಶಂಕಿಸಲಾಗಿದೆ.