ಮಹಿಳೆಯೋರ್ವಳ ಕಣ್ಣೀರಿಗೆ ಕಾರಣವಾಯಿತು ಸಂಜು ಸ್ಯಾಮ್ಸನ್ ಬಾರಿಸಿದ ಸಿಕ್ಸರ್..!
ಜೋಹಾನ್ಸ್ಬರ್ಗ್ನ ವಾಂಡರರ್ಸ್ ಮೈದಾನದಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ 4ನೇ ಪಂದ್ಯದಲ್ಲಿ ಟೀಂ ಇಂಡಿಯಾ ಓಪನರ್ ಸಂಜು ಸ್ಯಾಮ್ಸನ್ ಬಾರಿಸಿದ ಸಿಕ್ಸರ್ ಒಂದು ಯುವತಿಯೋರ್ವಳ ಕಣ್ಣೀರಿಗೆ ಕಾರಣವಾಗಿದೆ.
ಇನಿಂಗ್ಸ್ ನ 10ನೇ ಓವರ್ ನ್ನು ಟ್ರಿಸ್ಟನ್ ಸ್ಟಬ್ಸ್ ಎಸೆದಿದ್ದರು. ಈ ಓವರ್ನಲ್ಲಿ ಸ್ಯಾಮ್ಸನ್ ಎರಡು ಸಿಕ್ಸ್ ಸಿಡಿಸಿದ್ದರು. ಅದರಲ್ಲಿ ಒಂದು ಸಿಕ್ಸ್ ಕ್ರೀಡಾಂಗಣದ ರೇಲಿಂಗ್ಗೆ ತಗುಲಿ ಪುಟಿದ ಪರಿಣಾಮ ಚೆಂಡು ನೇರವಾಗಿ ಹೋಗಿ ಮಹಿಳೆಯೊಬ್ಬರ ಕೆನ್ನೆಗೆ ಬಡಿದಿದೆ.
ಸ್ಪೋಟಕ ಸೆಂಚುರಿ ಸಿಡಿಸಿ ಮಿಂಚಿದ ಸ್ಯಾಮ್ಸನ್ 56 ಎಸೆತಗಳಲ್ಲಿ 9 ಸಿಕ್ಸ್ ಹಾಗೂ 6 ಬೌಂಡರಿಗಳೊಂದಿಗೆ ಅಜೇಯ 109 ರನ್ ಬಾರಿಸಿದ್ದರು. ಈ ಗೆಲುವಿನೊಂದಿಗೆ ಭಾರತ ತಂಡವು ನಾಲ್ಕು ಪಂದ್ಯಗಳ ಟಿ20 ಸರಣಿಯನ್ನು 3-1 ಅಂತರದಿಂದ ಗೆದ್ದುಕೊಂಡಿತು.