ಅಂತಾರಾಷ್ಟ್ರೀಯಕ್ರೈಂ

ದ.ಆಫ್ರಿಕಾ: ಗುಂಡಿನ ದಾಳಿಯಲ್ಲಿ 9 ಮಂದಿ ಸಾವು


ದಕ್ಷಿಣ ಆಫ್ರಿಕಾದ ಚೊಹಾನ್‌ಬರ್ಗ್ ನಗರದಬಳಿ ರವಿವಾರ ಬೆಳಗ್ಗೆ ನಡೆದ ಗುಂಡಿನ ದಾಳಿಯಲ್ಲಿ ಕನಿಷ್ಠ 9 ಮಂದಿ ಸಾವನ್ನಪ್ಪಿದ್ದು  10 ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ.

ಸಾಂದರ್ಭಿಕ ಚಿತ್ರ


ಬೆಕ್ಕರ್ಸ್‌ ಡಾಲ್ ಪ್ರದೇಶದ ಪಬ್ ಒಂದರಲ್ಲಿ ರವಿವಾರ  ಎರಡು ವಾಹನಗಳಲ್ಲಿ ಆಗಮಿಸಿದ ಸುಮಾರು 12 ಗುರುತಿಸಲಾಗದ ದುಷ್ಕರ್ಮಿಗಳು ಪಬ್‌ ಒಳಗೆ ನುಗ್ಗಿ ಮನಬಂದಂತೆ ಗುಂಡು ಹಾರಿಸಿದ್ದು ಮೂವರು ಸಾವನಪ್ಪಿದು ಕೆಲವರು ಗಾಯಗೊಂಡಿದ್ದಾರೆ. ಪಬ್ ನಿಂದ ಹೊರಬಂದು ಗುಂಡಿನ ದಾಳಿ ಮುಂದುವರಿಸಿದ್ದು 6 ಮಂದಿ ಸಾವನ್ನಪ್ಪಿದ್ದಾರೆ. ಪರಾರಿಯಾಗುವುದಕ್ಕೂ ಮುನ್ನ ಮೃತರ ಮತ್ತು ಗಾಯಾಳುಗಳ ಬಳಿಯಿದ್ದ ವಸ್ತುಗಳನ್ನು ಹಂತಕರು ದೋಚಿದ್ದಾರೆ. ಗುಂಡಿನ ದಾಳಿ ನಡೆದ ಸ್ಥಳದಲ್ಲಿ ಪೊಲೀಸರು ಮತ್ತು ಭದ್ರತಾ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!