ಬೆಳ್ತಂಗಡಿ: ಮನೆಯಿಂದ ಲಕ್ಷಾಂತರ ರೂ ಮೌಲ್ಯದ ಚಿನ್ನಾಭರಣ ಕಳ್ಳತನ
ಬೆಳ್ತಂಗಡಿ: ಮನೆಯೊಂದರಿಂದ ಚಿನ್ನಾಭರಣಗಳನ್ನು ಕಳ್ಳರು ದೋಚಿದ ಘಟನೆ ವರದಿಯಾಗಿದೆ. ಯುವತಿಯೋರ್ವರು ಅಡುಗೆ ಕೋಣೆಯಲ್ಲಿ
ಕೆಲಸ ಮಾಡಿಕೊಂಡಿದ್ದ ವೇಳೆ ಮನೆಗೆ ನುಗ್ಗಿದ ಕಳ್ಳರು 3,12,000/- ರೂ ಮೌಲ್ಯದ 52 ಗ್ರಾಂ ತೂಕದ ಚಿನ್ನಾಭರಣಗಳನ್ನು ಕಳ್ಳತನ ಮಾಡಿದ ಘಟನೆ ಬೆಳ್ತಂಗಡಿ ತಾಲೂಕು ನೆರಿಯಾ ಗ್ರಾಮದ ಅಕ್ಕೋಳೆ ಎಂಬಲ್ಲಿ ನಡೆದಿದೆ.

ಬೆಳ್ತಂಗಡಿ ತಾಲೂಕು ನೆರಿಯಾ ಗ್ರಾಮದ ಅಕ್ಕೋಳೆ ನಿವಾಸಿ ಫಾತಿಮತ್ ರಂಝೀನ್ (19)ರವರ ದೂರಿನಂತೆ ಫೆ.19ರಂದು ಬೆಳಿಗ್ಗೆ 9.00 ಗಂಟೆಗೆ ತನ್ನ ಮನೆಯಲ್ಲಿ ಮನೆಯ ಬಾಗಿಲು ತೆರೆದಿಟ್ಟು ಅಡುಗೆ ಕೋಣೆಯಲ್ಲಿ ಕೆಲಸ ಮಾಡಿಕೊಂಡಿದ್ದು, ಕೆಲಸ ಮುಗಿಸಿ 9.30 ಗಂಟೆಗೆ ತನ್ನ ಮನೆಯಲ್ಲಿರುವ ಗೋದ್ರೆಜ್ನ ಕೋಣೆಗೆ ಹೋದಾಗ ಬಾಗಿಲು ತೆರೆದು ಬಟ್ಟೆಗಳೆಲ್ಲಾ ಚಲ್ಲಾಪಿಲ್ಲಿಯಾದ್ದು ಗೋದ್ರೆಜ್ನಲ್ಲಿ ಇಟ್ಟಿದ್ದ ಸುಮಾರು 52 ಗ್ರಾಂ ಚಿನ್ನಾಭರಣಗಳು ಕೂಡಾ ಕಾಣೆಯಾಗಿರುತ್ತದೆ.
ಯುವತಿ ಅಡುಗೆ ಕೋಣೆಯಲ್ಲಿ ಇದ್ದ ಸಮಯ ಯಾರೋ ಕಳ್ಳರು ಮನೆಯೊಳಗೆ ಬಂದು ಸುಮಾರು 3,12,000/- ರೂ ಮೌಲ್ಯದ 52 ಗ್ರಾಂ ತೂಕದ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ ಎಂಬುದಾಗಿ ಯುವತಿ ನೀಡಿದ ದೂರಿನ ಮೇರೆಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅ.ಕ್ರ: 06/2025 ಕಲಂ: 305 ಬಿ ಎನ್ ಎಸ್ ರಂತೆ ಪ್ರಕರಣ ದಾಖಲಾಗಿದೆ.