ಕರಾವಳಿ

ಮಂಗಳೂರು: ಜನಪ್ರಿಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಉಚಿತ ಮುಂಜಿ ಕಾರ್ಯಕ್ರಮ

ಮಂಗಳೂರು: ಮಂಗಳೂರಿನ ಪಡೀಲ್ ನಲ್ಲಿರುವ ಜನಪ್ರಿಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಉಚಿತ ಮುಂಜಿ ಕಾರ್ಯಕ್ರಮ ನಡೆಯಿತು.

ಮುಖ್ಯ ಅತಿಥಿಯಾಗಿ ಹನೀಫ್ ಹಾಜಿ ಗೋಳ್ತಮಜಲು ಭಾಗವಹಿಸಿದ್ದರು. ಪಡೀಲ್ ಮಸೀದಿ ಖತೀಬರಾದ ಜವಾದ್ ಸಹದಿ ದುವಾ ನೇರವೇರಿಸಿ, ಪ್ರವಾದಿಯವರ ಸುನ್ನತ್ ಕಾರ್ಯಕ್ರಮವನ್ನು ಏರ್ಪಡಿಸಿದ ಜನಪ್ರಿಯ ಆಸ್ಪತ್ರೆಯ ಕಾರ್ಯಕ್ಕೆ ಶ್ಲಾಘನೆ ಮಾಡಿ ಮುಂಜಿ ಕಾರ್ಯಕ್ರಮದ ಬಗ್ಗೆ ವಿವರಣೆ ನೀಡಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜನಪ್ರಿಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಮುಖ್ಯಸ್ಥರಾದ ಡಾ. ಅಬ್ದುಲ್ ಬಶೀರ್ ವಿ.ಕೆ, ಮುಂದಿನ ದಿನಗಳಲ್ಲಿ ಜನಸಾಮಾನ್ಯರಿಗೆ ಸಹಕಾರಿಯಾಗುವ ರೀತಿಯಲ್ಲಿ ತಾಲೂಕು ಮಟ್ಟದಲ್ಲಿ ವೈದ್ಯಕೀಯ ತಪಾಸಣೆ, ಮುಂಜಿ ಸೇರಿ ಹಲವು ಉಚಿತ ಶಿಬಿರಗಳನ್ನು ಜನಪ್ರಿಯ ಆಸ್ಪತ್ರೆಯ ವತಿಯಿಂದ ಏರ್ಪಡಿಸಲಾಗುವುದು ಎಂದು ಹೇಳಿದ್ದಾರೆ.

ಜನಪ್ರಿಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ನಿರ್ದೇಶಕರು ಮತ್ತು ಸಿಇಒ ಡಾ. ಕಿರಾಶ್ ಪರ್ತಿಪ್ಪಾಡಿ,
ಜನಪ್ರಿಯಾ ಆಸ್ಪತ್ರೆಯ ವೈದ್ಯರಾದ ಡಾ ಅವಿನಾಶ್, ಡಾ. ಮೊಹಮ್ಮದ್ ನುಹ್ಮಾನ್, ಡಾ. ಮೊಯ್ದೀನ್ ನಫ್ಸೀರ್, ಡಾ. ಮೊಹಮ್ಮದ್ ಮುಬಾಶಿರ್, ಡಾ. ನೂರ್ ಮೊಹಮ್ಮದ್, ಡಾ. ಶಫಾಕ್ ಮೊಹಮ್ಮದ್, ಡಾ. ಶಾರುಖ್ ಅಬ್ದುಲ್ಲಾ, ಡಾ. ಹಸನ್ ಮುಬಾರಕ್, ಡಾ. ಇಮ್ದಾದ್, ಡಾ. ಸೌಹಾನ್, ಡಾ.ಹಸನ್ ಸಾಲಿ ಉಪಸ್ಥಿತರಿದ್ದರು.

ಮಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಆಸ್ಪತ್ರೆಯೊಂದರಲ್ಲಿ ಮುಂಜಿ ಕಾರ್ಯಕ್ರಮ ಆಯೋಜಿಸಲಾಗಿದೆ‌. ಕಾರ್ಯಕ್ರಮದಲ್ಲಿ 100 ಮಕ್ಕಳಿಗೆ ಉಚಿತವಾಗಿ ಮುಂಜಿ ಮಾಡಲಾಗಿದೆ‌. ಇದಲ್ಲದೆ ಮಕ್ಕಳಿಗೆ ‌ಉಚಿತವಾಗಿ ಔಷಧಿಗಳನ್ನು ಕೂಡ ಒದಗಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!