ಫಾಳಿಲಾ’ ಸಮನ್ವಯ ಶಿಕ್ಷಣದಿಂದ ಮಹಿಳಾ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ: ಚುಂಗತ್ತರ ಉಸ್ತಾದ್
ಪುತ್ತೂರು: ಧಾರ್ಮಿಕ ಮತ್ತು ಲೌಕಿಕ ಸಮನ್ವಯ ಶಿಕ್ಷಣವು ವಿದ್ಯಾರ್ಥಿನಿಯರಲ್ಲಿ ನೈತಿಕ ಪ್ರಜ್ಞೆ ಬೆಳೆಸಲು ಪ್ರಮುಖ ಪಾತ್ರವಹಿಸುತ್ತಿದ್ದು, ‘ಸಮಸ್ತ’ದ ಅಧೀನದಲ್ಲಿ ಫಾಳಿಲಾ, ಫಳೀಲಾ ಸಮನ್ವಯ ಶಿಕ್ಷಣ ವ್ಯವಸ್ಥೆಯು ಮಹಿಳಾ ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಕ್ರಾಂತಿಯನ್ನು ಸೃಷ್ಟಿಸಿದೆ ಎಂದು ಸಿಎಸ್‌ಡಬ್ಲ್ಯೂಸಿ ಕೇಂದ್ರೀಯ ನಾಯಕ ಚುಂಗತ್ತರ ಸುಲೈಮಾನ್ ಫೈಝಿ ಉಸ್ತಾದ್ ಹೇಳಿದರು.
ಅವರು ಸಾಲ್ಮರ ಮೌಂಟನ್ ವ್ಯೂ ಅಸ್ವಾಲಿಹಾ ವುಮೆನ್ಸ್ ಕಾಲೇಜಿನಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಮಾಹಿತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಶಿಬಿರವನ್ನು ನಡೆಸಿಕೊಟ್ಟ ಸಿಎಸ್‌ಡಬ್ಲ್ಯೂಸಿ ಕೇಂದ್ರೀಯ ಕೋ-ಆರ್ಡಿನೇಟರ್ ಸಅದ್ ಫೈಝಿ ಅವರು ಮಾತನಾಡಿ, ಮುಂಬರುವ ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯಲು ವಿದ್ಯಾರ್ಥಿಗಳು ನಿರಂತರವಾಗಿ ಪ್ರಯತ್ನಿಸಬೇಕಾಗಿದ್ದು, ಅದಕ್ಕೆ ಪೂಷಕರು ಮತ್ತು ಶಿಕ್ಷಕರ ಪ್ರೋತ್ಸಾಹ ಅತಿ ಅಗತ್ಯ ಎಂದು ಅಭಿಪ್ರಾಯಪಟ್ಟರು.
ಸಮಾರಂಭದ ಅಧ್ಯಕ್ಷತೆಯನ್ನು ಮೌಂಟನ್ ವ್ಯೂ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಯು.ಮುಹಮ್ಮದ್ ಹಾಜಿ ಪಡೀಲ್ ಅವರು ವಹಿಸಿದರು.
ಫಾಳಿಲಾ,ಫಳೀಲಾ ಕರ್ನಾಟಕ ಝೋನಲ್ ಕಮಿಟಿ ಅಧ್ಯಕ್ಷ ಅಬ್ದುಲ್ ರಶೀದ್ ಹಾಜಿ ಪರ್ಲಡ್ಕ, ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಅಶ್ರಫ್, ಯೂಸುಫ್ ಮೊದಲಾದವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಉಸ್ತಾದ್ ಕೆ.ಎಂ.ಎ. ಕೊಡುಂಗಾಯಿ ಫಾಝಿಲ್ ಹನೀಫಿ ಸ್ವಾಗತಿಸಿ, ವಂದಿಸಿದರು.