ಕರಾವಳಿರಾಜಕೀಯ

15 ಸಾವಿರ ಕಾಂಗ್ರೆಸ್ ಓಟು ಎಲ್ಲಿ ಹೋಯಿತು..? ಬಾಬು ಶೆಟ್ಟಿ ಪ್ರಶ್ನೆ



ಪುತ್ತೂರು: ಕಳೆದ 5 ವರ್ಷಗಳ ಹಿಂದೆ ಕಾಂಗ್ರೆಸ್‌ನಿಂದ ಶಕುಂತಳಾ ಟಿ ಶೆಟ್ಟಿಯವರು ಸ್ಪರ್ದೆ ಮಾಡಿದಾಗ ಅವರಿಗೆ 71 ಸಾವಿರ ವೋಟು ಸಿಕ್ಕಿತ್ತು. ಆದರೆ ಈ ಬಾರಿ ಕಾಂಗ್ರೆಸ್‌ನಿಂದ ಅಶೋಕ್ ರೈ ಕಾಂಗ್ರೆಸ್‌ನಿಂದ ಸ್ಪರ್ದಿಸಿದಾಗ ಶಕುಂತಳಾ ಶೆಟ್ಟಿಗೆ ಸಿಕ್ಕಿದಷ್ಟು ವೋಟು ಸಿಕ್ಕಿಲ್ಲ ಹಾಗಾದರೆ ಕಾಂಗ್ರೆಸ್‌ನದ್ದೇ 15 ಸಾವಿರ ವೋಟು ಎಲ್ಲಿ ಹೋಗಿದೆ ಎಂದು ನರಿಮೊಗರು ಕಾಂಗ್ರೆಸ್ ಮುಖಂಡ ಬಾಬು ಶೆಟ್ಟಿ ಪ್ರಶ್ನಿಸಿದ್ದಾರೆ.

ನರಿಮೊಗರು ಸಿ ಎಬ್ಯಾಂಕ್ ಸಭಾಂಗಣದಲ್ಲಿ ನಡೆದ ವಲಯ ಮಟ್ಟದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಅವರು ಈ ವಿಷಯ ಪ್ರಸ್ತಾಪಿಸಿದರು.
ಶಕುಂತಳಾ ಶೆಟ್ಟಿಯವರು ಕಾಂಗ್ರೆಸ್‌ನಿಂದ ಸ್ಪರ್ದಿಸಿ ಮೊದಲ ಬಾರಿಗೆ ಗೆದ್ದಿದ್ದರು. ಆ ಬಳಿಕ ಸೋತಿದ್ದರು. ಈ ಅವಧಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸಾವಿರಾರು ಮತಗಳ ಸೇರ್ಪಡೆಯಾಗಿದೆ, ಹೊಸ ಮತದಾರರ ಸೇರ್ಪಡೆಯಾಗಿದೆ ಆ ವೋಟು ಎಲ್ಲಿ ಹೋಯಿತು ಎಂಬುದು ಉತ್ತರ ಸಿಗದ ಪ್ರಶ್ನೆಯಾಗಿದೆ. ಕಾಂಗ್ರೆಸ್ ಶಾಸಕರು ಗೆಲ್ಲಬೇಕು, ಕಾಂಗ್ರೆಸ್ ಸರಕಾರ ಬರಬೇಕು ಎಂದು ನಿಷ್ಟಾವಂತ ಕಾರ್ಯಕರ್ತರು ಹಗಲಿರುಳು ಕೆಲಸ ಮಾಡಿದ್ದಾರೆ. ಚುನಾವಣೆಯ ಸಂದರ್ಭದಲ್ಲಿ ಮನೆ ಮನೆಗೆ ತೆರಳಿ ವೋಟು ಕೊಡಿ ಎಂದು ಕೇಳಿದ್ದಾರೆ ಆದರೆ ಚುನಾವಣೆ ಮುಗಿದು ಲೆಕ್ಕ ಹಾಕುವಾಗ ಕಾಂಗ್ರೆಸ್‌ನ ವೋಟುಗಳು ಎಲ್ಲಿ ಹೋಗಿದೆ ಎಂದು ಲೆಕ್ಕವೇ ಸಿಗುತ್ತಿಲ್ಲ ಎಂದು ಅವರು ಹೇಳಿದರು.

ಆ ರೀತಿ ಮುಂದೆ ಆಗಬಾರದು. ನಾನು ಕಾಂಗ್ರೆಸ್ ಎಂದು ಹೇಳುತ್ತಲೇ ಕಾಂಗ್ರೆಸ್ ಗೆ ವೋಟು ಹಾಕದವರೂ ಇರಬಹುದು. ನಾವೆಲ್ಲರೂ ಸೇರಿ ಪಕ್ಷವನ್ನು ಗಟ್ಟಿಗೊಳಿಸಬೆಕಿದೆ. ಕಾಂಗ್ರೆಸ್‌ನ ನಿಷ್ಟಾವಂತ ಕಾರ್ಯಕರ್ತರಿಗೆ ನೋವಾಗದಂತೆ ನೋಡಿಕೊಳ್ಳಬೇಕಿದೆ. ಮುಂದೆ ಎಲ್ಲರೂ ಸೇರಿ ಪಕ್ಷವನ್ನು ಗಟ್ಟಿಗೊಳಿಸಬೇಕು. ಬ್ಯಾಟ್ ಸ್ಪರ್ದೆ ಮಾಡದೆ ಬಿಜೆಪಿಯೊಂದಿಗೆ ಸೇರ ಸ್ಪರ್ದೆ ಮಾಡಿದರೂ ನಮಗೆ 15000 ವೋಟು ಹೆಚ್ಚು ಬರಲೇಬೇಕಿತ್ತು ಆದರೆ 15 ಸಾವಿರ ‘ವೋಟು ಓಡೆಗ್ ಪೋಂಡು’ (15 ಸಾವಿರ ‘ವೋಟು ಎಲ್ಲಿಗೆ ಹೋಯಿತು)ಎಂಬುದು ಗೊತ್ತೇ ಆಗುತ್ತಿಲ್ಲ ಎಂದು ಹೇಳಿದರು.

ಸಭೆಯಲ್ಲಿ ಶಾಸಕ ಅಶೋಕ್ ರೈ, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಬ್ಲಾಕ್ ಅಧ್ಯಕ್ಷ ಎಂ ಬಿ ವಿಶ್ವನಾಥ ರೈ ಸಹಿತ ಪಕ್ಷದ ಮುಖಂಡರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!