ಕರಾವಳಿಜಿಲ್ಲೆರಾಜ್ಯ

ಪೊಲೀಸ್ ಇಲಾಖೆಯನ್ನು ಬಾಧಿಸುತ್ತಿದೆಯೇ ಗ್ರೂಪ್ ಸಿ-ಡಿ ವರ್ಗಾವಣೆಯ ನೀತಿ?

✍️ ಹಸೈನಾರ್ ಜಯನಗರ

ರಾಜ್ಯ ಸರ್ಕಾರ ಹೊರಡಿಸಿರುವ ನಿಯಮದಂತೆ ವಿವಿಧ ಇಲಾಖೆಗಳ ನೌಕರರ ಅಂತರ್ ಜಿಲ್ಲಾ ವರ್ಗಾವಣೆಗೆ ಇದ್ದ ಅವಕಾಶ ರದ್ದು ಮಾಡಿರುವುದು ಪೊಲೀಸ್ ಇಲಾಖೆಯ ಸಿಬ್ಬಂದಿಗಳಿಗೆ ಸಮಸ್ಯೆಗಳು ಬಾಧಿಸಿದಂತೆ ಕಂಡುಬರುತ್ತಿದೆ.
ಈ ನಿಯಮದಿಂದಾಗಿ ಕರ್ನಾಟಕ ನಾಗರೀಕ ಸೇವಾ ಸಾಮಾನ್ಯ ನೇಮಕಾತಿ ನಿಯಮ 1977 ನಿಯಮ ಗ್ರೂಪ್ ಸಿ ಮತ್ತು ಗ್ರೂಪ್ ಡಿ ನೌಕರರು ತಮ್ಮ ತಮ್ಮ ಸಮಸ್ಯೆಗಳನ್ನು ಹೇಳಲು ಆಗದಂತ ಪರಿಸ್ಥಿತಿಗೆ ಬಂದು ನಿಂತಂತಿದೆ.
ಪ್ರಸ್ತುತ ಸೇವೆಯಲ್ಲಿರುವ ಪೊಲೀಸ್ ಸಿಬ್ಬಂದಿಗಳು ನೇಮಕಾತಿ ಹೊಂದಿದ ಜಿಲ್ಲೆಯಲ್ಲೇ ಜೀವಮಾನವನ್ನು ಕಳೆಯಬೇಕಾಗಿರುವುದು ಸಮಸ್ಯೆಗೆ ಕಾರಣವಾಗಿದೆ. ಸರ್ಕಾರ ತಂದಿರುವ ನೀತಿಯಿಂದ ಪೊಲೀಸ್ ಇಲಾಖೆಯ ಸಿಬ್ಬಂದಿ ಬಳಲಿ ಹೋದಂತಿದೆ.
ಪೊಲೀಸ್ ಸಿಬ್ಬಂದಿಗಳ ಪ್ರಕಾರ ಪತಿಯೊಂದು ಕಡೆ ಪತ್ನಿಯೊಂದು ಕಡೆ ಕೆಲಸವನ್ನು ಮಾಡುತ್ತಿದ್ದರೂ ನೆಮ್ಮದಿಯ ಜೀವನ ಮಾಡಲು ವರ್ಗಾವಣೆ ಸಿಗದಂತ ದುಸ್ಥಿತಿ ಎದುರಾಗಿದೆ ಎಂಬ ನೋವು ಅವರಿಂದ ಕೇಳಿ ಬರುತ್ತಿದೆ.ಗ್ರೂಪ್ ಸಿ ಮತ್ತು ಗ್ರೂಪ್ ಡಿ ನೌಕರರಿಗೆ ವರ್ಗಾವಣೆಗೆ ಅವಕಾಶವೇ ಇಲ್ಲದೇ ಸಮಸ್ಯೆಗಳಲ್ಲಿ ಸಿಲುಕಿಕೊಂಡಿದ್ದಾರೆ.
ಅವರು ಹೇಳುವ ಪ್ರಕಾರ 1977ರಿಂದಲೂ ಅಂತರ್ ಜಿಲ್ಲಾ ವರ್ಗಾವಣೆಗೆ ಅವಕಾಶವಿತ್ತು. ಆದರೆ 2021ರಲ್ಲಿ ಕರ್ನಾಟಕ ನಾಗರೀಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮದಿಂದ 16 ಎ ಅನ್ನು ತೆಗೆದುಹಾಕಲಾಯಿತು.
ಈ ನಿಯಮವನ್ನು ತೆಗೆದುಹಾಕಿದ್ದರಿಂದ ಕುಟುಂಬದಿಂದ ದೂರವಿರುವ ಪೊಲೀಸರು ತಮ್ಮ ಕುಟುಂಬದ ಜೊತೆ ಸ್ವಂತ ಊರಿನಲ್ಲಿ ವಾಸ ಮಾಡಲು ಸಾಧ್ಯವಾಗುತ್ತಿಲ್ಲ. ಅನಾರೋಗ್ಯದ ಬಳಲುವ ತಂದೆತಾಯಿಯನ್ನು, ಪತ್ನಿ ಮಕ್ಕಳನ್ನು ನೋಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇನ್ನಿತರ ಕಾರಣಗಳಿಂದ ಸ್ವಂತ ಜಿಲ್ಲೆಗೆ ವರ್ಗಾವಣೆಯನ್ನು ಕೇಳಿದರು ಅವಕಾಶವಿಲ್ಲ. ಇದರಿಂದ ಪೊಲೀಸರ ಮನೋಸ್ಥೈರ್ಯವೇ ಇಲ್ಲದಂತಾಗಿದೆ ಎಂದು ಮಾತನಾಡಿಕೊಳ್ಳುತ್ತಾರೆ.
ಕರ್ನಾಟಕ ನಾಗರೀಕ ಸೇವಾ ಸಾಮಾನ್ಯ ನೇಮಕಾತಿ ನಿಯಮ 1977 ನಿಯಮ 16ಎ ಅನ್ನು ಮರುಜಾರಿಗೆ ಯತ್ನಗಳು ನಡೆದಿದ್ದರು ಸರ್ಕಾರ ಮಾತ್ರ ಇದರ ಬಗ್ಗೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ.
ಪ್ರಸ್ತುತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ವತಃ ಗೃಹ ಖಾತೆಯನ್ನು ನಿರ್ವಹಿಸಿದ ಅನುಭವವನ್ನು ಉಳ್ಳವರಾಗಿದ್ದಾರೆ. ಆದ್ದರಿಂದ ಈಗಾಗಲೇ ಹಲವಾರು ಮಂದಿ ಸಿಬ್ಬಂದಿಗಳು ರಾಜ್ಯದ ನಾನಾ ಕಡೆಗಳಿಂದ ತಮ್ಮ ಅಹವಾಲುಗಳನ್ನು ಸರ್ಕಾರದ ಗಮನಕ್ಕೆ ತರಲು ಪ್ರಯತ್ನಿಸುತ್ತಿದ್ದು ಫಲ ಸಿಗಬಹುದೆಂಬ ಭರವಸೆಯಲ್ಲಿ ಕಾಯುತ್ತಿದ್ದಾರೆ.
ಕರ್ನಾಟಕ ನಾಗರೀಕ ಸೇವಾ ಸಾಮಾನ್ಯ ನೇಮಕಾತಿ ನಿ
ನಿಯಮ 16ಎ ಅನ್ನು ತೆಗೆದುಹಾಕಿದ್ದರಿಂದ ಪತಿ ಪತ್ನಿ ದೂರಾಗುವ ಪ್ರಸಂಗ ಎದುರಾಗಿದೆ.
ಪೊಲೀಸ್ ಇಲಾಖೆಯ ನಿಯಮಾನುಸಾರ ಪೊಲೀಸರು ಪ್ರತಿಭಟನೆಯನ್ನು ಮಾಡುವಂತಿಲ್ಲ. ಪ್ರತಿಭಟನೆಯನ್ನು ಮಾಡಿದ್ದೇ ಆದರೆ ಕೆಲಸಕ್ಕೆ ಕುತ್ತು ಎದುರಾಗಲಿದೆ. ಕರ್ನಾಟಕ ನಾಗರೀಕ ಸೇವಾ ಸಾಮಾನ್ಯ ನೇಮಕಾತಿ ನಿಯಮ 1977ರ ತಿದ್ದುಪಡಿಯನ್ನು ಮಾಡಿ 16ಎ ಅನ್ನು ತೆಗೆದುಹಾಕಿದ್ದರಿಂದ ಕುಟುಂಬಸ್ಥರನ್ನು ನೋಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದರಿಂದ ಗ್ರೂಪ್ ಸಿ ಮತ್ತು ಗ್ರೂಪ್ ಡಿ ನೌಕರರ ಪೋಷಕರೇ ಮಕ್ಕಳ ವರ್ಗಾವಣೆ ಅನುಕೂಲವಾಗುವ 16ಎ ಮರು ಜಾರಿಗೆ ಒತ್ತಾಯಿಸಿ ಬೀದಿಗಳಿದು ಹೋರಾಡಲು ಸಿಬ್ಬಂದಿಗಳ ಪೋಷಕರು ಅಣಿಯಾಗುತ್ತಿದ್ದಾರೆ ಎಂದು ಕೇಳಿ ಬರುತ್ತಿದೆ.

ರಾಜ್ಯ ಸರ್ಕಾರ ಹೊರಡಿಸಿರುವ ನಿಯಮದಂತೆ ವಿವಿಧ ಇಲಾಖೆಗಳ ನೌಕರರ ಅಂತರ್ ಜಿಲ್ಲಾ ವರ್ಗಾವಣೆಗೆ ಇದ್ದ ಅವಕಾಶ ರದ್ದು ಮಾಡಿರುವುದು ಪೊಲೀಸ್ ಇಲಾಖೆಯ ಸಿಬ್ಬಂದಿಗಳಿಗೆ ಸಮಸ್ಯೆಗಳು ಬಾಧಿಸಿದಂತೆ ಕಂಡುಬರುತ್ತಿದೆ.
ಈ ನಿಯಮದಿಂದಾಗಿ ಕರ್ನಾಟಕ ನಾಗರೀಕ ಸೇವಾ ಸಾಮಾನ್ಯ ನೇಮಕಾತಿ ನಿಯಮ 1977 ನಿಯಮ ಗ್ರೂಪ್ ಸಿ ಮತ್ತು ಗ್ರೂಪ್ ಡಿ ನೌಕರರು ತಮ್ಮ ತಮ್ಮ ಸಮಸ್ಯೆಗಳನ್ನು ಹೇಳಲು ಆಗದಂತ ಪರಿಸ್ಥಿತಿಗೆ ಬಂದು ನಿಂತಂತಿದೆ.

ಪ್ರಸ್ತುತ ಸೇವೆಯಲ್ಲಿರುವ ಪೊಲೀಸ್ ಸಿಬ್ಬಂದಿಗಳು ನೇಮಕಾತಿ ಹೊಂದಿದ ಜಿಲ್ಲೆಯಲ್ಲೇ ಜೀವಮಾನವನ್ನು ಕಳೆಯಬೇಕಾಗಿರುವುದು ಸಮಸ್ಯೆಗೆ ಕಾರಣವಾಗಿದೆ. ಸರ್ಕಾರ ತಂದಿರುವ ನೀತಿಯಿಂದ ಪೊಲೀಸ್ ಇಲಾಖೆಯ ಸಿಬ್ಬಂದಿ ಬಳಲಿ ಹೋದಂತಿದೆ.
ಪೊಲೀಸ್ ಸಿಬ್ಬಂದಿಗಳ ಪ್ರಕಾರ ಪತಿಯೊಂದು ಕಡೆ ಪತ್ನಿಯೊಂದು ಕಡೆ ಕೆಲಸವನ್ನು ಮಾಡುತ್ತಿದ್ದರೂ ನೆಮ್ಮದಿಯ ಜೀವನ ಮಾಡಲು ವರ್ಗಾವಣೆ ಸಿಗದಂತ ದುಸ್ಥಿತಿ ಎದುರಾಗಿದೆ ಎಂಬ ನೋವು ಅವರಿಂದ ಕೇಳಿ ಬರುತ್ತಿದೆ.ಗ್ರೂಪ್ ಸಿ ಮತ್ತು ಗ್ರೂಪ್ ಡಿ ನೌಕರರಿಗೆ ವರ್ಗಾವಣೆಗೆ ಅವಕಾಶವೇ ಇಲ್ಲದೇ ಸಮಸ್ಯೆಗಳಲ್ಲಿ ಸಿಲುಕಿಕೊಂಡಿದ್ದಾರೆ.

ಅವರು ಹೇಳುವ ಪ್ರಕಾರ 1977ರಿಂದಲೂ ಅಂತರ್ ಜಿಲ್ಲಾ ವರ್ಗಾವಣೆಗೆ ಅವಕಾಶವಿತ್ತು. ಆದರೆ 2021ರಲ್ಲಿ ಕರ್ನಾಟಕ ನಾಗರೀಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮದಿಂದ 16 ಎ ಅನ್ನು ತೆಗೆದುಹಾಕಲಾಯಿತು.
ಈ ನಿಯಮವನ್ನು ತೆಗೆದುಹಾಕಿದ್ದರಿಂದ ಕುಟುಂಬದಿಂದ ದೂರವಿರುವ ಪೊಲೀಸರು ತಮ್ಮ ಕುಟುಂಬದ ಜೊತೆ ಸ್ವಂತ ಊರಿನಲ್ಲಿ ವಾಸ ಮಾಡಲು ಸಾಧ್ಯವಾಗುತ್ತಿಲ್ಲ. ಅನಾರೋಗ್ಯದ ಬಳಲುವ ತಂದೆತಾಯಿಯನ್ನು, ಪತ್ನಿ ಮಕ್ಕಳನ್ನು ನೋಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇನ್ನಿತರ ಕಾರಣಗಳಿಂದ ಸ್ವಂತ ಜಿಲ್ಲೆಗೆ ವರ್ಗಾವಣೆಯನ್ನು ಕೇಳಿದರು ಅವಕಾಶವಿಲ್ಲ. ಇದರಿಂದ ಪೊಲೀಸರ ಮನೋಸ್ಥೈರ್ಯವೇ ಇಲ್ಲದಂತಾಗಿದೆ ಎಂದು ಮಾತನಾಡಿಕೊಳ್ಳುತ್ತಾರೆ.
ಕರ್ನಾಟಕ ನಾಗರೀಕ ಸೇವಾ ಸಾಮಾನ್ಯ ನೇಮಕಾತಿ ನಿಯಮ 1977 ನಿಯಮ 16ಎ ಅನ್ನು ಮರುಜಾರಿಗೆ ಯತ್ನಗಳು ನಡೆದಿದ್ದರು ಸರ್ಕಾರ ಮಾತ್ರ ಇದರ ಬಗ್ಗೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ.

ಪ್ರಸ್ತುತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ವತಃ ಗೃಹ ಖಾತೆಯನ್ನು ನಿರ್ವಹಿಸಿದ ಅನುಭವವನ್ನು ಉಳ್ಳವರಾಗಿದ್ದಾರೆ. ಆದ್ದರಿಂದ ಈಗಾಗಲೇ ಹಲವಾರು ಮಂದಿ ಸಿಬ್ಬಂದಿಗಳು ರಾಜ್ಯದ ನಾನಾ ಕಡೆಗಳಿಂದ ತಮ್ಮ ಅಹವಾಲುಗಳನ್ನು ಸರ್ಕಾರದ ಗಮನಕ್ಕೆ ತರಲು ಪ್ರಯತ್ನಿಸುತ್ತಿದ್ದು ಫಲ ಸಿಗಬಹುದೆಂಬ ಭರವಸೆಯಲ್ಲಿ ಕಾಯುತ್ತಿದ್ದಾರೆ.
ಕರ್ನಾಟಕ ನಾಗರೀಕ ಸೇವಾ ಸಾಮಾನ್ಯ ನೇಮಕಾತಿ ನಿ
ನಿಯಮ 16ಎ ಅನ್ನು ತೆಗೆದುಹಾಕಿದ್ದರಿಂದ ಪತಿ ಪತ್ನಿ ದೂರಾಗುವ ಪ್ರಸಂಗ ಎದುರಾಗಿದೆ.
ಪೊಲೀಸ್ ಇಲಾಖೆಯ ನಿಯಮಾನುಸಾರ ಪೊಲೀಸರು ಪ್ರತಿಭಟನೆಯನ್ನು ಮಾಡುವಂತಿಲ್ಲ. ಪ್ರತಿಭಟನೆಯನ್ನು ಮಾಡಿದ್ದೇ ಆದರೆ ಕೆಲಸಕ್ಕೆ ಕುತ್ತು ಎದುರಾಗಲಿದೆ.

ಕರ್ನಾಟಕ ನಾಗರೀಕ ಸೇವಾ ಸಾಮಾನ್ಯ ನೇಮಕಾತಿ ನಿಯಮ 1977ರ ತಿದ್ದುಪಡಿಯನ್ನು ಮಾಡಿ 16ಎ ಅನ್ನು ತೆಗೆದುಹಾಕಿದ್ದರಿಂದ ಕುಟುಂಬಸ್ಥರನ್ನು ನೋಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದರಿಂದ ಗ್ರೂಪ್ ಸಿ ಮತ್ತು ಗ್ರೂಪ್ ಡಿ ನೌಕರರ ಪೋಷಕರೇ ಮಕ್ಕಳ ವರ್ಗಾವಣೆ ಅನುಕೂಲವಾಗುವ 16ಎ ಮರು ಜಾರಿಗೆ ಒತ್ತಾಯಿಸಿ ಬೀದಿಗಳಿದು ಹೋರಾಡಲು ಸಿಬ್ಬಂದಿಗಳ ಪೋಷಕರು ಅಣಿಯಾಗುತ್ತಿದ್ದಾರೆ ಎಂದು ಕೇಳಿ ಬರುತ್ತಿದೆ.

ಪೊಲೀಸರಿಗೆ ಆಗ್ತಿರೋ ತೊಂದರೆಗಳೇನು?

ಅತಿ ಹೆಚ್ಚು ಒತ್ತಡದಲ್ಲಿ ಕೆಲಸ ಮಾಡತ್ತಿರುವ ಇಲಾಖೆ ಪೊಲೀಸ್ ಇಲಾಖೆ.
ಬೇರೆ ಇಲಾಖೆ ನೌಕರರು ಶನಿವಾರ, ಭಾನುವಾರ ಸೇರಿದಂತೆ ಸರ್ಕಾರಿ ರಜೆಗಳಲ್ಲಿ ರಜೆ ತೆಗೆದುಕೊಂಡು ತಮ್ಮ ತಮ್ಮ ಊರುಗಳಿಗೆ ಹೋಗಿ ಬರುತ್ತಾರೆ. ಕುಟುಂಬಕ್ಕೆ ಸಮಯವನ್ನು ಮೀಸಲಿಡುತ್ತಾರೆ. ಆದರೆ ಪೊಲೀಸ್ ಇಲಾಖೆಯಲ್ಲಿ ಸರಿಯಾಗಿ ರಜೆ ಸಿಗುವುದಿಲ್ಲ.
ವಿಶೇಷ ಸಮಯಗಳಲ್ಲಿ , ಹಬ್ಬ, ಇನ್ನಿತರ ದೊಡ್ಡ ದೊಡ್ಡ ಕಾರ್ಯಕ್ರಮಗಳಲ್ಲಿ ವಿಐಪಿಗಳ ಭದ್ರತೆ ಸೇರಿದಂತೆ ಪೊಲೀಸ್ ಇಲಾಖೆಯಲ್ಲಿ ಬಿಡುವಿಲ್ಲದೆ ಕೆಲಸವನ್ನು ನಿರ್ವಹಿಸಬೇಕಾಗಿದೆ.

ಕೆಲಸಕ್ಕೆ ಅರ್ಜಿಹಾಕುವಾಗ ಹೊರಡಿಸುವ ನೋಟಿಫಿಕೇಷನ್‌ನಲ್ಲಿಲ್ಲದ ನಿಯಮವನ್ನು ಕೆಲಸಕ್ಕೆ ಸೇರಿದ ಮೇಲೆ ಜಾರಿ ಮಾಡಿದರೆ. ಸ್ವಂತ ಜಿಲ್ಲೆಗೆ ಹೋಗುವುದು ಹೇಗೆ ಎಂಬ ಪ್ರಶ್ನೆ.
ಹೆತ್ತವರು ಸ್ವಂತ ಊರನ್ನು ಬಿಟ್ಟು ಬರಲ್ಲ. ಪೊಲೀಸರು ಊರಿಗೆ ಹೋಗುವುದಿಲ್ಲ ಇದರಿಂದ ಸಂಬಂಧಗಳಿಗೆ ಕಡಿವಾಣ ಬಿದ್ದಂತಾಗುತ್ತಿದೆ.
ಪೊಲೀಸರಿಗೆ ಮಾನಸಿಕ ಒತ್ತಡ ಹೆಚ್ಚಾಗುತ್ತಿದೆ.ಇದಕ್ಕಾಗಿ ಕಡೆಯ ಪಕ್ಷ ಪೊಲೀಸ್ ಇಲಾಖೆಗಾದರು ಈ ನಿಯಮಗಳಿಂದ ವಿನಾಯ್ತಿ ನೀಡಿ ವರ್ಗಾವಣೆಗೆ ಅವಕಾಶವನ್ನು ಮಾಡಿಕೊಡಬೇಕು ಎಂದು ಕೆಳಹಂತದ ಪೊಲೀಸ್ ಅಧಿಕಾರಿಗಳ ಆಗ್ರಹವಾಗಿದೆ.
ಒಟ್ಟಿನಲ್ಲಿ ತಮ್ಮ ಬದುಕನ್ನು ಸಮಾಜದ ರಕ್ಷಣೆಗೆ ಮೀಸಲಿಡುವ ಆರಕ್ಷಕರ ಬದುಕಿಗೆ ರಕ್ಷಣೆ, ಮತ್ತು ಸರಕಾರದ ಕೃಪೆ ಬೇಕಾಗಿದೆ.

Leave a Reply

Your email address will not be published. Required fields are marked *

error: Content is protected !!