ಕರಾವಳಿಜಿಲ್ಲೆರಾಜ್ಯ

RBI ಮಾಜಿ ನಿರ್ದೇಶಕ ನವೀನ್ ಭಂಡಾರಿಯವರ ಪತ್ನಿ ಸರೋಜ ಆಳ್ವ ನಿಧನ

ಪುತ್ತೂರು: ಭಾರತೀಯ ರಿಸರ್ವ್ ಬ್ಯಾಂಕಿನ ಮಾಜಿ ನಿರ್ದೇಶಕ, ಕೆಪಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ, ಪ್ರಸ್ತುತ ಬೆಂಗಳೂರು ಸುಂದರಾಮ್ ಶೆಟ್ಟಿ ನಗರದ ಸೌಹಾರ್ದ ಸಹಕಾರಿಯ ಅಧ್ಯಕ್ಷರಾಗಿರುವ ಅಗರಿ ನವೀನ್ ಭಂಡಾರಿಯವರ ಪತ್ನಿ ಶ್ರೀಮತಿ ಸರೋಜ ಆಳ್ವ (62ವ.)ರವರು ಅ.1ರಂದು ಸಂಜೆ ಮಂಗಳೂರು ಯೆನೆಪೋಯ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.ಕಳೆದ ಮೂರು

ವರ್ಷಗಳಿಂದ ಅನಾರೋಗ್ಯದಿಂದಿದ್ದ ಅವರ ಆರೋಗ್ಯ ದಿಢೀರ್ ಹದಗೆಟ್ಟ ಹಿನ್ನೆಲೆಯಲ್ಲಿ ಸೆ.22ರಂದು ಆಸ್ಪತ್ರೆಯಲ್ಲಿ ದಾಖಲಿಸಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.ಆದರೆ ಚಿಕಿತ್ಸೆಗೆ ಸ್ಪಂದಿಸದೆ ಅವರು ಕೊನೆಯುಸಿರೆಳೆದಿದ್ದಾರೆ.

ಕಾರ್ಕಳ ಇನ್ನಾ ದಿ.ಕೆ.ರಾಮ ಆಳ್ವ ಮತ್ತು ದಿ.ಅಪ್ಪಿ ಆಳ್ವರ ಪುತ್ರಿಯಾಗಿರುವ ಸರೋಜ ಆಳ್ವರವರು ಈ ಹಿಂದೆ ಬೆಂಗಳೂರಿನಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಜಂಟಿ ನಿರ್ದೇಶಕರಾಗಿ ಸುಮಾರು 35 ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿ 2019ರಲ್ಲಿ ಸ್ವಯಂ ನಿವೃತ್ತಿ ಪಡೆದುಕೊಂಡಿದ್ದರು.ಮೃತರು ಪತಿ ನವೀನ್ ಭಂಡಾರಿ, ಪುತ್ರಿ ಅನುಷ್ಕಾ ಭಂಡಾರಿ, ಇಂಗ್ಲೆಂಡ್‌ನಲ್ಲಿ ನ್ಯೂರೋ ಸರ್ಜನ್ ಆಗಿರುವ ಅಳಿಯ ವೀಕ್ಷಿತ್ ಶೆಟ್ಟಿ ಅವರನ್ನು ಅಗಲಿದ್ದಾರೆ. ಅ.2ರಂದು ಅಂತಿಮ ಕ್ರಿಯೆ:

ಮೃತರ ಅಂತಿಮ ವಿಧಿ ವಿಧಾನ ಕಾರ್ಯಕ್ರಮಗಳನ್ನು ಅ.2ರಂದು ಬೆಳಿಗ್ಗೆ 11 ಗಂಟೆಗೆ ಮಂಗಳೂರು ಚಿಲಿಂಬಿ ಮೂರನೇ ಕ್ರಾಸ್‌ನಲ್ಲಿರುವ ಲ್ಯಾಂಡ್ ಟ್ರೇಡ್ ಸಾಲಿಟೈರ್‌ನ ಪ್ಲಾಂಟ್ ನಂ.601ರಲ್ಲಿ ಮುಗಿಸಿ ಅಪರಾಹ್ನ 2 ಗಂಟೆ ವೇಳೆಗೆ ಬೋಳೂರು ಸ್ಮಶಾನದಲ್ಲಿ ಅಂತ್ಯ ಸಂಸ್ಕಾರ ನಡೆಸಲಾಗುವುದು ಎಂದು ಮೃತರ ಪತಿ ಎ.ನವೀನ್ ಭಂಡಾರಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!