ಕರಾವಳಿ

ಖ್ಯಾತ ನಿರೂಪಕ, ಮುಖ್ಯ ಶಿಕ್ಷಕ ಪ್ರದೀಪ್ ಬಾಕಿಲ ಹೃದಯಾಘಾತದಿಂದ ನಿಧನ

ಪುತ್ತೂರು: ಅಲಂಕಾರು ಗ್ರಾಮದ ಬಾಕಿಲ ನಿವಾಸಿ, ಗೋಳಿತಟ್ಟು ಶಾಂತಿನಗರ ಶಾಲೆ ಪ್ರಭಾರ ಮುಖ್ಯ ಶಿಕ್ಷಕ ಪ್ರದೀಪ್ ಬಾಕಿಲ(42.ವ) ಹೃದಯಾಘಾತದಿಂದ ಡಿ.5 ರಂದು ನಿಧನರಾಗಿದ್ದಾರೆ

ಪ್ರದೀಪ್ ಬಾಕಿಲ ಅವರು ಜೇಸಿಐ ಆಲಂಕಾರು ಇದರ ಪೂರ್ವಾಧ್ಯಕ್ಷರಾಗಿದ್ದರು. ವೃತ್ತಿಯಲ್ಲಿ ಶಿಕ್ಷಕರಾಗಿರುವ ಇವರು ತರಬೇತುದಾರರಾಗಿದ್ದು ತಾವು ಸೇವೆ ಸಲ್ಲಿಸುತ್ತಿರುವ ಶಾಂತಿನಗರ ಸರಕಾರಿ ಶಾಲೆಯಲ್ಲಿ ಹಲವು ವಿನೂತನ ಕಾರ್ಯಕ್ರಮಗಳ ಮೂಲಕ ಶಿಕ್ಷಣ ನೀಡುತ್ತಿದ್ದರು. ಇವರು ಅತ್ಯುತ್ತಮ ನಿರೂಪಕರಾಗಿ ಗುರುತಿಸಿಕೊಂಡಿದ್ದರು. ಇವರ ನಿಧನಕ್ಕೆ ಹಲವಾರು ಗಣ್ಯರು ಸಂತಾಪ ಸೂಚಿಸಿದ್ದಾರೆ

Leave a Reply

Your email address will not be published. Required fields are marked *

error: Content is protected !!