ಬೆಂಗಳೂರು ರೋಯಲ್ ಗ್ರೂಪ್‌ನಿಂದ ಸಂಪ್ಯ ಪೊಲೀಸ್ ಠಾಣೆಗೆ ಶುದ್ಧ ಕುಡಿಯುವ ನೀರಿನ ಯಂತ್ರ ಕೊಡುಗೆ
ಪುತ್ತೂರು: ಶುದ್ಧ ಕುಡಿಯುವ ನೀರನ್ನು ಪೂರೈಸುವ ಯಂತ್ರವನ್ನು ಬೆಂಗಳೂರು ರೋಯಲ್ ಗ್ರೂಪ್ ವತಿಯಿಂದ ಸಂಪ್ಯ ಪೊಲೀಸ್ ಠಾಣೆಗೆ ಕೊಡುಗೆಯಾಗಿ ಸೆ.20ರಂದು ಹಸ್ತಾಂತರಿಸಲಾಯಿತು.
ಕುಡಿಯುವ ನೀರಿನ ಯಂತ್ರವನ್ನು ಸ್ವೀಕರಿಸಿದ ಸಂಪ್ಯ ಪೊಲೀಸ್ ಠಾಣಾ ಪಿಎಸ್‌ಐ ಜಂಬೂರಾಜ್ ಮಹಾಜನ್ ಮಾತನಾಡಿ, ರೋಯಲ್ ಗ್ರೂಪ್ ನವರು ನಾವು ಕೇಳದೆಯೇ ಈ ಒಂದು ಕೊಡುಗೆಯನ್ನು ಠಾಣೆಗೆ ನೀಡಿದ್ದಾರೆ. ಸಾರ್ವಜನಿಕ ಜೀವನದಲ್ಲಿ ಜವಬ್ದಾರಿಯುತ ಕೆಲಸ ಮಾಡಿ, ಈ ಒಂದು ಶುದ್ಧ ಕುಡಿಯುವ ನೀರಿನ ಯಂತ್ರದಿಂದ ನಮ್ಮ ಠಾಣೆಯ ಸಿಬ್ಬಂದಿಗಳಿಗೆ ಎಷ್ಟು ಅನುಕೂಲವಾಗುತ್ತೋ ಅದರಿಂದ ಹೆಚ್ಚಾಗಿ ಠಾಣೆಗೆ ಬರುವ ಸಾರ್ವಜನಿಕರಿಗೆ ಶುದ್ದ ಕುಡಿಯುವ ನೀರು ಸಿಗುತ್ತದೆ, ಈ ಒಂದು ವ್ಯವಸ್ಥೆಯನ್ನು ಮಾಡಿಕೊಟ್ಟ ರೋಯಲ್ ಗ್ರೂಪ್ ಬೆಂಗಳೂರು ಇದರ ಹಂಝಾರ್ ರೋಯಲ್ ಮತ್ತು ರಫೀಕ್ ರೋಯಲ್‌ರವರಿಗೆ ಧನ್ಯವಾದಗಳನ್ನು ಅರ್ಪಿಸಿದರು.
ಬೆಂಗಳೂರು ರೋಯಲ್ ಗ್ರೂಪ್‌ನ ರಫೀಕ್ ಹಾಜಿ ರೋಯಲ್‌ರವರು ಮಾತನಾಡಿ, ನಮ್ಮಿಂದ ಸಾಧ್ಯವಾಗುವ ಸಮಾಜ ಸೇವೆಯನ್ನು ಮಾಡಬೇಕು ಎಂಬ ಉದ್ದೇಶದಿಂದ ಸಂಪ್ಯ ಠಾಣೆಗೆ ಈ ಒಂದು ಶುದ್ಧ ಕುಡಿಯುವ ನೀರಿನ ಯಂತ್ರವನ್ನು ನಮ್ಮ ಬೆಂಗಳೂರು ರೋಯಲ್ ಗ್ರೂಪ್ ವತಿಯಿಂದ ಕೊಡುಗೆಯಾಗಿ ನೀಡಿದ್ದೇವೆ. ಈ ಅವಕಾಶ ಮಾಡಿಕೊಟ್ಟ ಸಂಪ್ಯ ಠಾಣೆಯ ಪಿಎಸ್‌ಐ ಹಾಗೂ ಸಿಬ್ಬಂದಿ ವರ್ಗಕ್ಕೆ ನಾವು ಧನ್ಯವಾದಗಳನ್ನು ಅರ್ಪಿಸುತ್ತೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬೆಂಗಳೂರು ರೋಯಲ್ ಗ್ರೂಪ್‌ನ ರಫೀಕ್ ಹಾಜಿ ರೋಯಲ್, ಹಂಝಾರ್ ಹಾಜಿ ರೋಯಲ್, ಇರ್ಷಾದ್ ಹಾಜಿ ರೋಯಲ್, ಅಶ್ರಫ್ ಹಾಜಿ ರೋಯಲ್, ಡಿ.ಕೆ.ಹಂಝ ಹಾಜಿ, ಡಿ.ಕೆ ಶಮೀರ್, ಒಳಮೊಗ್ರು ಗ್ರಾಪಂ ಉಪಾಧ್ಯಕ್ಷ ಅಶ್ರಫ್ ಉಜಿರೋಡಿ, ಉದ್ಯಮಿ ಯೂಸುಫ್ ಹಾಜಿ ಕೈಕಾರ, ಕುಂಬ್ರ ವರ್ತಕರ ಸಂಘದ ಅಧ್ಯಕ್ಷ, ಹೊಟೇಲ್ ಉದ್ಯಮಿ ರಫೀಕ್ ಅಲ್‌ರಾಯ, ಉದ್ಯಮಿ ಅಶೋಕ್ ಪೂಜಾರಿ ಬೊಳ್ಳಾಡಿ, ಖಲೀಲ್ ಚೆನ್ನಾರ್, ಅಶ್ರು ರೋಯಲ್, ಬಾಳಯ ಅಬೂಬಕ್ಕರ್ ರೋಯಲ್, ರಮೇಶ್ ಆಳ್ವ ಕಲ್ಲಡ್ಕ, ಅಝೀಜ್ ನೀರ್ಪಾಡಿ, ಶರೀಪ್ ಉಜಿರೋಡಿ, ಹಕೀಂ ಉಜಿರೋಡಿ, ಸಾದಿಕ್ ಬಾಳಯ, ಜಮಾಲ್ ಅಡ್ಕ, ಅಶ್ರಫ್ ನೀರ್ಪಾಡಿ ಹಾಗೂ ಸಂಪ್ಯ ಪೊಲೀಸ್ ಠಾಣೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಠಾಣಾ ಸಿಬ್ಬಂದಿ ಪ್ರವೀಣ್ ರೈಯವರು ಸ್ವಾಗತಿಸಿ, ವಂದಿಸಿದರು.
ಏನಿದು ರೋಯಲ್ ಗ್ರೂಪ್? ಬೆಂಗಳೂರು ರೋಯಲ್ ಗ್ರೂಪ್ ಒಳಮೊಗ್ರು ಗ್ರಾಮದ ಮುಳಿಯಡ್ಕದ ರಫೀಕ್ ಹಾಜಿ ಮತ್ತು ಹಂಝಾರ್ ಹಾಜಿಯವರ ನೇತೃತ್ವದ ರೋಯಲ್ ಗ್ರೂಪ್ ಉದ್ಯಮ ಕ್ಷೇತ್ರದಲ್ಲಿ ತನ್ನದೇ ಹೆಸರು ಪಡೆದುಕೊಂಡಿದೆ. ಬೆಂಗಳೂರಿನಲ್ಲಿ ರೋಯಲ್ ಗ್ರೂಪ್‌ನ 24 ಸಹ ಸಂಸ್ಥೆಗಳಿದ್ದು ನೂರಾರು ಮಂದಿಗೆ ಉದ್ಯೋಗ ಮಾಡಿಕೊಂಡಿದ್ದಾರೆ.