ಕರಾವಳಿ

ಸುಳ್ಯ ಅನ್ಸಾರಿಯಾ ಸಂಸ್ಥೆಯ ಬಹು ವರ್ಷದ ಕನಸಿನ ಗಲ್ಫ್ ಆಡಿಟೋರಿಯಂ ಲೋಕಾರ್ಪಣೆ





ಸುಳ್ಯ: ಸುಳ್ಯದ ಜಟ್ಟಿಪಳ್ಳದ ನಾವೂರು ರಸ್ತೆಯ ಅನ್ಸಾರಿಯಾ ಎಜ್ಯುಕೇಶನ್ ಸೆಂಟರ್ ಸಮೀಪ ನೂತನವಾಗಿ ನಿರ್ಮಾಣವಾದ ಅತ್ಯಾಧುನಿಕ ಹಾಗೂ ಸುಸಜ್ಜಿತ ಸಭಾಂಗಣ ‘ಗಲ್ಫ್ ಅಡಿಟೋರಿಯಂ ನ.29ರಂದು ಲೋಕಾರ್ಪಣೆಗೊಂಡಿತು.

ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಕಾರ್ಯದರ್ಶಿ ಬದುರು ಸ್ಸಾದಾತ್ ಅಸ್ಸಯ್ಯದ್ ಖಲೀಲುಲ್ ಬುಖಾರಿ ತಂಙಳ್ ಕಡಲುಂಡಿರವರು ಅಡಿಟೋರಿಯಂ ನ್ನು ಉದ್ಘಾಟಿಸಿದರು.

ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಸಂಯುಕ್ತ ಖಾಝಿ ಝೈನುಲ್ ಉಲಮಾ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಈ ಸಂದರ್ಭ ಉಪಸ್ಥಿತರಿದ್ದರು.

ಅನ್ಸಾರಿಯಾ ಎಜ್ಯುಕೇಷನ್ ಸೆಂಟರ್ ಅಧ್ಯಕ್ಷ ಹಾಜಿ ಅಬ್ದುಲ್ ಮಜೀದ್ ಜನತಾ, ಪ್ರಧಾನ ಕಾರ್ಯದರ್ಶಿ ಲತೀಫ್ ಹರ್ಲಡ್ಕ, ಅನ್ಸಾರಿಯಾ ಕಾರ್ಯದರ್ಶಿಗಳಾದ ಎ.ಬಿ ಕಮಾಲ್,ಸಯ್ಯಿದ್ ಕುಂಞಿಕೋಯ ತಂಗಳ್,ಸಯ್ಯಿದ್ ತಾಹಿರ್ ತಂಗಳ್ ಗಾಂಧಿನಗರ ಜುಮಾ ಮಸ್ಜಿದ್ ಖತೀಬರಾದ ಆಶ್ರಫ್ ಖಾಮಿಲ್,ಸಲಹಾ ಸಮಿತಿ ಸದಸ್ಯರಾದ ಇಕ್ಬಾಲ್ ಎಲಿಮಲೆ, ಅನ್ಸಾರಿಯಾ ಗಲ್ಫ್ ಆಡಿಟೋರಿಯಂ ಉದ್ಘಾಟನಾ ಸಮಾರಂಭದ ಪ್ರಚಾರ ಸಮಿತಿ ಸಂಚಾಲಕರಾದ ಇಕ್ಬಾಲ್ ಕನಕಮಜಲು, ಮುನೀರ್ ಜಟ್ಟಿಪಳ್ಳ, ಅನ್ಸಾರಿಯಾ ಕಟ್ಟಡ ನಿರ್ಮಾಣ ಸಮಿತಿ ಅಧ್ಯಕ್ಷ ಅಬ್ದುಲ್ ಖಾದರ್ ಹಾಜಿ ಪಟೇಲ್, ಎಸ್ ಎಂ ಹಮೀದ್,ನ.ಪಂ ಸದಸ್ಯರುಗಳಾದ ಉಮ್ಮರ್ ಕೆ ಎಸ್, ಶರೀಫ್ ಕಂಠಿ, ರಿಯಾಜ್ ಕಟ್ಟೆಕ್ಕಾರ್ಸ್, ನಾಮ ನಿರ್ದೇಶಕ ಸದಸ್ಯ ಸಿದ್ದಿಕ್ ಕೊಕ್ಕೊ, ಮುಖಂಡರುಗಳಾದ ಟಿ ಎಂ ಶಹಿದ್ ತೆಕ್ಕಿಲ್, ಹಾಜಿ ಅದಂ ಕಮ್ಮಾಡಿ, ಹಾಜಿ ಮುಸ್ತಫಾ ಜನತಾ,ಹಮೀದ್ ಬೀಜ ಕೊಚ್ಚಿ, ಉದ್ಯಮಿ ಅಬ್ದುಲ್ ರಹಿಮಾನ್ ಸಂಕೇಶ್ ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!