ಕರಾವಳಿ

ಸುಳ್ಯ ಅನ್ಸಾರಿಯಾ ಗಲ್ಫ್ ಆಡಿಟೋರಿಯಂ ಉದ್ಘಾಟನಾ ಸಮಾರಂಭ





ಸುಳ್ಯದ ಜಟ್ಟಿಪಳ್ಳ ಅನ್ಸಾರಿಯಾ ಎಜ್ಯುಕೇಷನ್ ಸೆಂಟರ್ ‘ಗಲ್ಫ್ ಅಡಿಟೋರಿಯಂ ಇದರ ಉದ್ಘಾಟನಾ ಸಮಾರಂಭ ನ 29 ರಂದು ಎ ಜಿ ಸಿ ಸಿ ಆಡಿಟೋರಿಯಂ ವೇದಿಕೆಯಲ್ಲಿ ನಡೆಯಿತು.

ಈ ನೂತನ ಆಡಿಟೋರಿಯಂ ಉದ್ಘಾಟನೆ ಮಾಡಿದ ಸಮಸ್ತ ಕೇರಳ ಜಂ ಇಯ್ಯತುಲ್ ಉಲಮಾ ಕಾರ್ಯದರ್ಶಿ ಬದ್ರುಸ್ಸಾದಾತ್ ಖಲೀಲುಲ್ ಬುಖಾರಿ ತಂಙಳ್ ಕಡಲುಂಡಿರವರು ಉದ್ಘಾಟನಾ ಭಾಷಣ ಮಾಡಿ ‘ಈ ಭಾಗದ ಮುಖಂಡರ ಮತ್ತು ಜನ ಸಮುದಾಯದ ಒಗ್ಗಟ್ಟಿನ ಪ್ರತಿಫಲವಾಗಿ ಈ ಒಂದು ಭವ್ಯ ಭವನ ನಿರ್ಮಿಸಿ ಸಮುದಾಯಕ್ಕೆ ಅರ್ಪಿಸಲು ಸಾಧ್ಯವಾಗಿದೆ. ಒಗ್ಗಟ್ಟಿನಲ್ಲಿದ್ದರೆ ಯಾವುದೇ ಕಷ್ಟವನ್ನು ಪರಿಹರಿಸಲು ಸಾಧ್ಯ. ಆದ್ದರಿಂದ ಒಗ್ಗಟ್ಟು ಮತ್ತು ಶಾಂತಿ ಸೌಹಾರ್ದತೆ ನೆಲೆ ನಿಲ್ಲಬೇಕು. ಅದಕ್ಕಾಗಿ ಪ್ರತಿಯೊಬ್ಬರು ಜೀವನವನ್ನು ರೂಪಿಸಿಕೊಳ್ಳಬೇಕೆಂದು ಕರೆ ನೀಡಿದರು.

ಗಾಂಧಿನಗರ ಜುಮಾ ಮಸ್ಜಿದ್ ಆಡಳಿತ ಸಮಿತಿ ಅಧ್ಯಕ್ಷರಾದ ಹಾಜಿ ಕೆ ಎಂ ಎಸ್ ಮಹಮ್ಮದ್ ಅಧ್ಯಕ್ಷತೆ ವಹಿಸಿದ್ದರು.

ಸಭಾ ಕಾರ್ಯಕ್ರಮವನ್ನು ದ ಕ ಜಿಲ್ಲಾ, ಉಡುಪಿ,ಚಿಕ್ಕಮಗಳೂರು ಖಾಝಿ ಜೈನುಲ್ ಉಲಮಾ ಮಾಣಿ ಉಸ್ತಾದ್ ದುವಾ ನೆರವೇರಿಸಿ ಉದ್ಘಾಟಿಸಿ ಮಾತನಾಡಿ ಸಂಸ್ಥೆಗೆ ಶುಭಾರೈಸಿದರು.

ವೇದಿಕೆಯಲ್ಲಿ ಸಯ್ಯಿದ್ ಕುಂಞಿ ಕೋಯಾ ಸಅದಿ ತಂಙಳ್ ಸುಳ್ಯ, ಸಯ್ಯಿದ್ ತಾಹಿರ್ ತಂಙಳ್, ಗಾಂಧಿನಗರ ಜುಮಾ ಮಸ್ಜಿದ್ ಖತೀಬರಾದ ಅಶ್ರಫ್ ಖಾಮಿಲ್ ಸಖಾಫಿ, ಅನ್ಸಾರಿಯಾ ಎಜ್ಯುಕೇಷನ್ ಸೆಂಟರ್ ಅಧ್ಯಕ್ಷ ಹಾಜಿ ಅಬ್ದುಲ್ ಮಜೀದ್ ಜನತಾ, ಪ್ರಧಾನ ಕಾರ್ಯದರ್ಶಿ ಲತೀಫ್ ಹರ್ಲಡ್ಕ, ಅನ್ಸಾರಿಯಾ ಕಾರ್ಯದರ್ಶಿಗಳಾದ ಎ.ಬಿ ಕಮಾಲ್,ಕಟ್ಟಡ ಸಮಿತಿ ಅಧ್ಯಕ್ಷ ಹಾಜಿ ಅಬ್ದುಲ್ ಖಾದರ್ ಪಟೇಲ್, ಕೋಶಾಧಿಕಾರಿ ಎಸ್ ಎಂ ಹಮೀದ್, ಉದ್ಯಮಿ ಅಬ್ದುಲ್ ರಹಿಮಾನ್ ಸಂಕೇಶ್,ಆನ್ಸಾರಿಯಾ ಗಲ್ಫ್ ಆಡಿಟೋರಿಯಂ ಉದ್ಘಾಟನಾ ಸಮಾರಂಭದ ಪ್ರಚಾರ ಸಮಿತಿ ಸಂಚಾಲಕರಾದ ಇಕ್ಬಾಲ್ ಕನಕಮಜಲು, ಗಲ್ಫ್ ಸಮಿತಿ ಉಪಾಧ್ಯಕ್ಷ ಮುನೀರ್ ಜಟ್ಟಿಪಳ್ಳ,ಎಂ ಬಿ ಮಹಮ್ಮದ್ ಮದನಿ ದಮಾಮ್, ಮುಖಂಡರುಗಳಾದ ಟಿ ಎಂ ಶಹಿದ್ ತೆಕ್ಕಿಲ್,ಹಾಜಿ ಮುಸ್ತಫಾ ಜನತಾ,ಹಮೀದ್ ಬೀಜಕೊಚ್ಚಿ, ಹಸನುಲ್ ಫೈಝಿ ಸ್ಥಾಪಕಾಧ್ಯಕ್ಷರು ಡಿ.ಕೆ.ಎಸ್.ಸಿ ದ.ಕ & ಉಡುಪಿ, ಇಬ್ರಾಹಿಂ ಫೈಝಿ ಗೌರವಾಧ್ಯಕ್ಷರು ಅಲ್ ಅಮೀನ್ ಯೂತ್ ಸೆಂಟರ್ ಪೈಚಾರ್, ಅನ್ಸಾರಿಯಾ ಗಲ್ಸ್ ಸೆಂಟ್ರಲ್ ಕಮಿಟಿ ಅಧ್ಯಕ್ಷ ಸಂಶುದ್ದಿನ್ ದಮಾಮ್,ಇಬ್ರಾಹಿಂ ನಡುಬೈಲು, ಲತೀಫ್ ನ್ಯಾಷನಲ್ ಯು ಎ ಇ, ಸಿದ್ದಿಕ್ ಓಲ್ಡ್ ಗೇಟ್ ಬಹರೈನ್, ಅಬೂಬಕರ್ ಹಿಮಮಿ ಸಖಾಫಿ ಪ್ರಾಂಶುಪಾಲರು,ಆಡಿಟೋರಿಯಂ ಕಾಮಗಾರಿ ಸಮಿತಿ ಉಪಾಧ್ಯಕ್ಷ ಎಸ್ ಪಿ ಅಬೂಬಕ್ಕರ್,
ಕಾರ್ಯದರ್ಶಿಗಳಾದ ಶರೀಫ್ ಜಟ್ಟಿಪಳ್ಳ, ಕೆ.ಎ ಅಬ್ದುಲ್ ಕಲಾಂ ಬೀಜಕೊಚ್ಚಿ,ಮುಹಮ್ಮದ್ ಕಮಾಲ್, ಹಾಜಿ ಎಸ್ ಆದಂ ಕಮ್ಮಾಡಿ,ಲೀಗಲ್ ಅಡ್ಡೆಸರ್ ಅಡ್ವಕೇಟ್ ಜೆ.ಎನ್ ಅಬೂಬಕರ್ ಅಡ್ಡಾರ್,ಉಸ್ತುವಾರಿ ಸಿದ್ದೀಕ್ ಕಟ್ಟೆಕ್ಕಾರ್,ಹಾಜಿ ಕೆ. ಹಸನ್,ಕಾಮಗಾರಿ ಉಸ್ತುವಾರಿ ಹಾಜಿ ಎಸ್.ಎಂ ಮುಸ್ತಫಾ ಬೀಜಕೊಚ್ಚಿ, ಉಮರ್ ಕೆ.ಎಸ್, ಜನಾಬ್ ಶಾಫಿ ಕುತ್ತಮೊಟ್ಟೆ,ನಿರ್ದೇಶಕರುಗಳಾದ ಹಾಜಿ ಅಬ್ದುಲ್ ಹಮೀದ್ ಜನತಾ,ಕೆ.ಎ ಅಬ್ದುಲ್ ಕಲಾಂ ಕಟ್ಟೆಕ್ಕಾರ್,ಕೆ.ಎ ಅಬ್ದುಲ್ ಗಫ್ಫಾರ್, ಮುಹಮ್ಮದ್ ಶರೀಫ್ ಎಂ,ಉಮ‌ರ್ ಕೊಲ್ಚಾರ್, ಸಿದ್ದೀಕ್ ಕೊಕೋ, ಕೆ.ಬಿ ಇಬ್ರಾಹಿ ಸಲಹಾ ಸಮಿತಿ ಸದಸ್ಯರುಗಳಾದ ಹಾಜಿ ಅಬ್ದುಲ್ಲಾ ಕಟ್ಟೆಕ್ಕಾರ್, ಹಾಜಿ ಐ. ಇಸ್ಮಾಯಿಲ್, ಮುಹಮ್ಮದ್ ಇಕ್ಬಾಲ್ ಎಲಿಮಲೆ, ಹಾಜಿ ಅಬ್ದುಲ್ ಖಾದರ್ ಕಲ್ಲಪಳ್ಳಿ,ಹಾಜಿ ಜಿ.ಬಾಬಾ ಎಲಿಮಲೆ, ಮೆನೇಜರ್ ಮುಹಮ್ಮದ್ ಉವೈಸ್,ವಕೀಲರುಗಳಾದ ಮೂಸಾ ಪೈಂಬೆಚ್ಚಾಲು, ನೋಟರಿ ಪವಾಝ್ ಕನಕಮಜಲು ಮೊದಲಾದವರು ಉಪಸ್ಥಿತರಿದ್ದರು.

ಅನ್ಸಾರಿಯ ಜುಮಾ ಮಸ್ಜಿದ್ ಖತೀಬ್ ಹಾಫಿಲ್ ಹಾಮೀದ್ ಸಖಾಫಿ ಪ್ರಾಸ್ತವಿಕ ಮಾತನಾಡಿ ಸ್ವಾಗತಿಸಿದರು.
ಕೆ ಬಿ ಮಜೀದ್, ಅಡ್ವಕೇಟ್ ಅಬ್ದುಲ್ಲಾ ಹಿಮಮಿ, ಇಕ್ಬಾಲ್ ಕನಕಮಜಲು,ಕಮಾಲ್ ಅಜ್ಜಾವರ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸಯ್ಯಿದರು ಮತ್ತು ಉಲಮಾಗಳ ನೇತೃತ್ವ ದಲ್ಲಿ ಮೌಲೂದ್ ಪಾರಾಯಣ ನಡೆಯಿತು. ಕಾರ್ಯಕ್ರಮದಲ್ಲಿ ತಾಲೂಕಿನ ವಿವಿಧ ಭಾಗದ ಮಸೀದಿಯ ಖತೀಬರುಗಳು, ಮದರಸ ಅಧ್ಯಾಪಕರುಗಳು, ಆಡಳಿತ ಪದಾಧಿಕಾರಿಗಳು, ಸಮಿತಿ ಸದಸ್ಯರು ಹಾಗೂ ನೂರಾರು ಮಂದಿ ಮುಸ್ಲಿಂ ಭಾಂದವರು ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಕಟ್ಟದ ಕಾಮಾಗಾರಿಗೆ ಸಹಕಾರ ನೀಡಿದ ಕಮಿಟಿ ಮುಖಂಡರುಗಳಾದ ಎಸ್ ಎಂ ಹಮೀದ್, ಹಾಜಿ ಅಬೂಬಕ್ಕರ್ ಪಟೇಲ್, ಮೊದಲಾದವರನ್ನು ಸನ್ಮಾನಿಸಲಾಯಿತು.

Leave a Reply

Your email address will not be published. Required fields are marked *

error: Content is protected !!