ರಾಷ್ಟ್ರೀಯ

ಜೈಲಿನಿಂದ ಬಿಡುಗಡೆಗಾಗಿ ಕಾಯುತ್ತಿರುವ ರಹೀಂ

ಕಳೆದ 18 ವರ್ಷಗಳಿಂದ ರಿಯಾದ್ ಜೈಲಿನಲ್ಲಿರುವ ಕೇರಳದ ಅಬ್ದುಲ್ ರಹೀಮ್ ಬಿಡುಗಡೆಗೆ ಸತತ ಪ್ರಯತ್ನ ನಡೆಯುತ್ತಿದ್ದರೂ ಕೂಡಾ ಇನ್ನೂ ಬಿಡುಗಡೆ ಭಾಗ್ಯ ಮಾತ್ರ ಸಿಕ್ಕಿಲ್ಲ. ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದ ರಹೀಂ ಅವರು ಮರಣ ದಂಡನೆ ರದ್ದು ತೀರ್ಪಿನ ಹೊರತಾಗಿಯೂ ಇನ್ನು ಕೂಡ ಜೈಲಿನಲ್ಲೇ ಕಾಲ ಕಳೆಯುತ್ತಿದ್ದಾರೆ.

ರಹೀಂ ಮತ್ತು ಅವರ ತಾಯಿ

ಈ ಪ್ರಕರಣದ ಮರುಪರಿಶೀಲನೆ ಮುಂದೂಡಲಾಗಿದ್ದು, ನ್ಯಾಯಾಲಯ ಎರಡು ವಾರಗಳಲ್ಲಿ ಮತ್ತೊಮ್ಮೆ ಪರಿಶೀಲಿಸಲಿದೆ ಎಂದು ವರದಿಯಾಗಿದೆ. ಮೃತ ಸೌದಿ ಮಗುವಿನ ಕುಟುಂಬವು ಹಣಕಾಸಿನ ನೆರವು ಸ್ವೀಕರಿಸಲು ಸಮ್ಮತಿಸಿ ಕ್ಷಮೆ ನೀಡಲು ಒಪ್ಪಿಕೊಂಡ ನಂತರ ರಿಯಾದ್ ಕ್ರಿಮಿನಲ್ ಕೋರ್ಟ್ ಮರಣದಂಡನೆ ಶಿಕ್ಷೆ ರದ್ದುಗೊಳಿಸಿತ್ತು. ಆದರೆ ಕಾನೂನು ಪ್ರಕ್ರಿಯೆ ಮಾತ್ರ ರಹೀಮ್ ಅವರ ಬಿಡುಗಡೆಗೆ ತೊಡಕಾಗಿದೆ. ರಹೀಂ ಬಿಡುಗಡೆಗೆ ಕ್ರೌಡ್ ಫಂಡಿಂಗ್ ನಡೆಸುವ ಮೂಲಕ 34 ಕೋಟಿ ರೂ ಸಂಗ್ರಹಿಸಲಾಗಿತ್ತು. ಇತ್ತೀಚೆಗೆ ರಹೀಂ ತಾಯಿ ಮತ್ತು ಸಹೋದರ ರಿಯಾದ್ ಜೈಲಿನಲ್ಲಿ ರಹೀಂ ಅವರನ್ನು ಭೇಟಿಯಾಗಿದ್ದರು.

Leave a Reply

Your email address will not be published. Required fields are marked *

error: Content is protected !!