ಕ್ರೈಂರಾಷ್ಟ್ರೀಯ

ಹಾವಿನ ಜೊತೆ ಹುಚ್ಚಾಟವಾಡಿ ಪ್ರಾಣ ಕಳೆದುಕೊಂಡ ಯುವಕ



ಯುವಕನೊಬ್ಬ ಹಾವನ್ನು ಹಿಡಿದುಕೊಂಡು ಹುಚ್ಚಾಟ  ಮೆರೆದಿದ್ದು ಪರಿಣಾಮ ವ್ಯಕ್ತಿ ಸಾವನ್ನಪ್ಪಿರುವ ಘಟನೆ  ಉತ್ತರಪ್ರದೇಶದ ಡಿಯೋರಿಯಾ ಜಿಲ್ಲೆಯಲ್ಲಿ  ನಡೆದಿರುವುದಾಗಿ ವರದಿಯಾಗಿದೆ. 

ಯುವಕ ಕುಡಿದ ಮತ್ತಿನಲ್ಲಿ ಹಾವೊಂದನ್ನು  ಹಿಡಿದುಕೊಂಡು ನನಗೆ ಕಚ್ಚು ಎಂದು ಕೂಗಾಡುತ್ತಾ  ಹಾವನ್ನು ಚುಂಬಿಸುವುದು, ಕುತ್ತಿಗೆ ಸುತ್ತಿಕೊಳ್ಳುವುದು ಮಾಡಿ ಹುಚ್ಚಾಟ ಮಾಡುತ್ತಿದ್ದ ಎನ್ನಲಾಗಿದೆ.ಇದರಿಂದ ಕೋಪಗೊಂಡ ಹಾವು ಯುವಕನಿಗೆ ಹಲವು ಬಾರಿ ಕಚ್ಚಿದ ಪರಿಣಾಮ ಆತ ಸಾವನ್ನಪ್ಪಿದ್ದಾನೆ ಎಂದು ತಿಳಿದು  ಬಂದಿದೆ. ಸ್ಥಳದಲ್ಲಿದ್ದವರು ದೃಶ್ಯವನ್ನು ಮೊಬೈಲ್ ಕ್ಯಾಮರಾದಲ್ಲಿ  ಸೆರೆ ಹಿಡಿದಿದ್ದಾರೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!