ವಿಟ್ಲ: ಗಣೇಶ ಪೂಜಾರಿ ಗಡಿಪಾರು
ವಿಟ್ಲ: ಠಾಣಾ ವ್ಯಾಪ್ತಿಯ ಕೇಪು ಗ್ರಾಮದ ಬಡಕೋಡಿ ನಿವಾಸಿ ಗಣೇಶ ಪೂಜಾರಿಯನ್ನು ಹಲವು ಅಪರಾಧ ಕೃತ್ಯಗಳಲ್ಲಿ ಭಾಗಿಯಾದ ಹಿನ್ನೆಲೆಯಲ್ಲಿ ಗಡಿಪಾರು ಮಾಡಲಾಗಿದೆ.
ಹಲ್ಲೆ, ದೊಂಬಿ, ಕೊಲೆಯತ್ನ, ಜೂಜು, ಸರಕಾರಿ ನೌಕರನ ಕರ್ತವ್ಯಕ್ಕೆ ಅಡ್ಡಿ ಸೇರಿದಂತೆ ಒಟ್ಟು 14 ಅಪರಾಧ ಪ್ರಕರಣಗಳಲ್ಲಿ ಗಣೇಶ ಪೂಜಾರಿ ಆರೋಪಿಯಾಗಿದ್ದಾನೆ.
ಠಾಣಾ ವ್ಯಾಪ್ತಿಯಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಠಾಣಾಧಿಕಾರಿಗಳ ವರದಿಯ ಮೇರೆಗೆ ಮಂಗಳೂರು ಉಪವಿಭಾಗೀಯ ದಂಡಾಧಿಕಾರಿ ಹಾಗೂ ಸಹಾಯಕ ಆಯುಕ್ತರು ಗಡಿಪಾರು ಆದೇಶ ನೀಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಿಂದ ಹಾಸನ ಆಲೂರು ಪೊಲೀಸ್ ಠಾಣಾ ವ್ಯಾಪ್ತಿಗೆ ಗಡಿಪಾರು ಮಾಡುವ ಬಗ್ಗೆ ಆದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ. ಸದ್ರಿ ಆದೇಶದಂತೆ ವಿಟ್ಲ ಪೊಲೀಸರು ಆಲೂರು ಪೊಲೀಸ್ ಠಾಣೆಗೆ ಕಳುಹಿಸಿದ್ದಾರೆ.


