ಇನ್ನು ಮುಂದೆ ವಾಹನಕ್ಕೆ ಫ್ಯಾನ್ಸಿ ನಂಬರ್ ಪಡೆಯಲು ದುಬಾರಿ ಬೆಲೆ
ಮುಂಬೈ: ಮಹಾರಾಷ್ಟ್ರದ ಜನರು ಇನ್ನು ತಮ್ಮ ವಾಹನಕ್ಕೆ ಫ್ಯಾನ್ಸಿ ನಂಬರ್ ಪಡೆಯಬೇಕೆಂದರೆ ಈಗ ತೆರುತ್ತಿದ್ದ ಹಣದ ದುಪ್ಪಟ್ಟು ಹಣ ತೆರಬೇಕಾಗುತ್ತದೆ. ಬೆಲೆ ಪರಿಷ್ಕರಣೆಗೆ ರಾಜ್ಯ ಸರ್ಕಾರ ಸಾರಿಗೆ ಇಲಾಖೆ ನಿರ್ಧರಿಸಿದೆ.

0001 ನಂಬರ್‌ಪ್ಲೇಟ್ ಬೇಕೆಂದರೆ ಈವರೆಗೆ ನಾಲ್ಕು ಚಕ್ರ ವಾಹನದ ಮಾಲೀಕರು 5 ಲಕ್ಷ ರೂ. ಕೊಡಬೇಕಿತ್ತು. ಆದರೆ ಇನ್ನು ಈ ಸಂಖ್ಯೆಗೆ 15 ಲಕ್ಷ ರೂ. ಕೊಡಬೇಕಾಗುತ್ತದೆ. ಹಾಗೆಯೇ ದ್ವಿಚಕ್ರ ವಾಹನ ಮಾಲೀಕರು 3 ಲಕ್ಷ ರೂ. ಕೊಡಬೇಕಾಗುತ್ತದೆ.
0009, 0099, 0999, 9999, 0786ನಂತಹ ಸಂಖ್ಯೆಗೆ ಕಾರುಗಳ ಮಾಲೀಕರು 1.5 ಲಕ್ಷ ಅಥವಾ ಅದಕ್ಕಿಂತ ಅಧಿಕ ಹಾಗೂ ದ್ವಿಚಕ್ರ ವಾಹನ ಮಾಲೀಕರು 50,000 ಅಥವಾ ಅದಕ್ಕಿಂತ ಅಧಿಕ ಹಣ ತೆರಬೇಕಾಗುತ್ತದೆ. ಕೆಲವೊಂದು ನಂಬರ್‌ಪ್ಲೇಟ್‌ಗಳ ಬೆಲೆಯು ವಾಹನಗಳ ಬೆಲೆಗಿಂತಲೂ ಅಧಿಕವಾಗಲಿದೆ.