“ಅಶೋಕ್ ರೈಕುಲೆನ್ ತೂಯೆ, ನನ ಎಲ್ಲೆ ಸೈಂಡಲಾ ಆವು” ಹಿರಿ ಜೀವದ ಮಾತು ವೈರಲ್
ಪುತ್ತೂರು: ನವಂಬರ್ 2ರಂದು ಪುತ್ತೂರಿನಲ್ಲಿ ನಡೆದ “ಅಶೋಕ ಜನಮನ” ಬೃಹತ್ ವಸ್ತ್ರ ವಿತರಣಾ ಸಮಾರಂಭದಲ್ಲಿ 84 ವರ್ಷದ ವಯೋ ವೃದ್ಧರೊಬ್ಬರು “ಅಶೋಕ್ ರೈಕುಲೆನ್ ತೂಯೆ, ನನ ಎಲ್ಲೆ ಸೈಂಡಲಾ ಆವು” (ಅಶೋಕ್ ರೈಯವರನ್ನು ನೋಡಿದೆ, ಇನ್ನು ನಾಳೆ ಸತ್ತರೂ ಆಗಬಹುದು) ಎಂದು ಮಾತನಾಡಿದ್ದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲಾಗಿತ್ತು.
ವಿಷಯ ತಿಳಿದ ಶಾಸಕ ಅಶೋಕ್ ಕುಮಾರ್ ರೈ ಅವರು ಇದೀಗ ಖುದ್ದು ವೃದ್ಧ ದಂಪತಿಗಳ(ಸುಬ್ರಾಯ-ಪುಷ್ಪಾವತಿ) ನೆಹರೂ ನಗರ ಸಮೀಪದ ಶೇವಿರೆಯ ಮನೆಗೆ ತೆರಳಿ ಹಿರಿ ಜೀವಗಳ ಆಶೀರ್ವಾದ ಪಡೆದು, ಬಳಿಕ ಅವರ ಜೊತೆ ಮಾತುಕತೆ ನಡೆಸಿ ಅವರನ್ನು ನಗದು ಪುರಸ್ಕಾರದೊಂದಿಗೆ ಸನ್ಮಾನಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಅಶೋಕ್ ರೈಯವರು ‘ಇವರು ನನ್ನನ್ನು ನೋಡಬೇಕು’ ಎಂದು ಹೇಳಿದ್ದ ವಿಚಾರ ತಿಳಿದು ಮನಸ್ಸು ಕರಗಿತು. ಸಂತೋಷವಾಯಿತು. ಎಲ್ಲರಿಗೂ ಪ್ರೀತಿ, ವಿಶ್ವಾಸ ಮುಖ್ಯ. ನಾವೆಲ್ಲರೂ ಪರಸ್ಪರ ಪ್ರೀತಿ ವಿಶ್ವಾಸದಿಂದ ಜೀವಿಸುವುದೇನೆ ನಿಜವಾದ ಜೀವನ ಎಂದರು. ಈ ದಂಪತಿಗಳ ಜೊತೆ ನಾನಿದ್ದೇನೆ ಎಂದು ಧೈರ್ಯ ತುಂಬಿದ್ದೇನೆ, ಏನೇ ಅವಶ್ಯಕತೆ ಬಂದರೂ ನನಗೆ ಕರೆ ಮಾಡುವಂತೆ ಹೇಳಿದ್ದೇನೆ ಎಂದು ಶಾಸಕರು ಹೇಳಿದರು. ಶಾಸಕರ ಈ ನಡೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ.