ಕರಾವಳಿಕ್ರೈಂ

ಬಂಟ್ವಾಳ: ಕೊಲೆಯತ್ನ, ಹಲ್ಲೆ, ಪ್ರಕರಣದ ಆರೋಪಿಯನ್ನು ಬಂಧಿಸಿದ ಪೊಲೀಸರುಬಂಟ್ವಾಳ: ಹಲವು ವರ್ಷಗಳ ಹಿಂದಿನ ಕೊಲೆಯತ್ನ, ಹಲ್ಲೆ, ಅವಾಚ್ಯ ಶಬ್ದಗಳಿಂದ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಟ್ವಾಳ ಪೊಲೀಸರು ಕಾಸರಗೋಡಿನಲ್ಲಿ ಬಂಧಿಸಿದ್ದಾರೆ.

ಕಾಸರಗೋಡು, ಕುಂಜತ್ತೂರು ತೂಮಿನಾಡು ನಿವಾಸಿ ಮಹಮ್ಮದ್ ಫಾರೂಕ್ ಬಂಧಿತ ಆರೋಪಿ.

ಬಂಟ್ವಾಳ ನಗರ ಪೊಲೀಸ್ ಠಾಣಾಯಲ್ಲಿ ಅ.ಕ್ರ. 201/2007 U/s 341, 324, 307 rw 34 ಐಪಿಸಿ ಯಂತೆ ಪ್ರಕರಣ ದಾಖಲಾಗಿದ್ದು ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಪಿಎಸ್ಐ ಧನರಾಜ್, ಸಿಬ್ಬಂದಿಗಳಾದ ಗಣೇಶ್, ರಾಜೇಶ್, ಇರ್ಷಾದ್ ರವರು ಕೇರಳದ ಬಂದ್ಯೋಡು ಎಂಬಲ್ಲಿಂದ ಆರೋಪಿಯನ್ನು ದಸ್ತಗಿರಿ ಮಾಡಿ ಸತ್ರ ನ್ಯಾಯಾಲಯ ಮಂಗಳೂರಿಗೆ ಹಾಜರು‌ ಪಡಿಸಿದ್ದು, ಎಲ್ ಪಿಸಿ ಆಗಿದ್ದ ಪ್ರಕರಣದಲ್ಲಿ ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

Leave a Reply

Your email address will not be published. Required fields are marked *

error: Content is protected !!