ಕರಾವಳಿ

ಸುಳ್ಯ :ಶಟ್ಲ್ ಬ್ಯಾಡ್ಮಿಂಟನ್ ಆಡಲು ತೆರಳಿದ್ದ ವ್ಯಕ್ತಿ ಹೃದಯಾಘಾತದಿಂದ ಮೃತ್ಯು

ಸುಳ್ಯ: ಶಟಲ್ ಬ್ಯಾಡ್ಮಿಂಟನ್ ಆಡಲು ತೆರಳಿದ್ದ ವ್ಯಕ್ತಿ ಆಡುತಿದ್ದ ವೇಳೆ ಆಯಾಸಗೊಂಡಿದ್ದು ಅವರನ್ನು ಸುಳ್ಯ ಆಸ್ಪತ್ರೆಗೆ ಕೊಡೊಯ್ಯುವ ವೇಳೆ ಕುಸಿದು ಬಿದ್ದು ಮೃತ ಪಟ್ಟ ಘಟನೆ ನ.1ರಂದು ರಾತ್ರಿ ನಡೆದಿದೆ.

ಮೃತ ವ್ಯಕ್ತಿ ಸಲೀತ್ ಅಹ್ಮದ್ (38.ವ). ಮೂಲತಃ ಕೇರಳ ವಯನಾಡ್ ಜಿಲ್ಲೆಯ ನಿವಾಸಿಯಾಗಿದ್ದ ಅವರು ಸುಳ್ಯದಲ್ಲಿ ಹಲವಾರು ವರ್ಷದಿಂದ ಪ್ಲಂಬರ್ ವೃತ್ತಿ ನಿರ್ವಹಿಸುತ್ತಿದ್ದಾರೆ.

ಹವ್ಯಾಸಿ ಬ್ಯಾಡ್ಮಿಂಟನ್ ಆಟಗಾರ ಸಲೀತ್ ಅಹಮ್ಮದ್ ನ.1ರಂದು ರಾತ್ರಿ ಎಂದಿನಂತೆ ಕುರುಂಜಿ ಗುಡ್ಡೆ ಬಳಿಯಿರುವ ಒಳಾಂಗಣ ಶಟ್ಲ್ ಬ್ಯಾಡ್ಮಿಂಟನ್ ಮೈದಾನದಲ್ಲಿ ಆಟ ಆಡುತ್ತಿದ್ದ ವೇಳೆ ಇದ್ದಕಿದ್ದಂತೆ ಆಯಾಸಗೊಂಡರು ಎನ್ನಲಾಗಿದೆ. ತನಗೆ ಆಯಾಸೊಳ್ಳುವುದೆಂದು ತನ್ನನ್ನು ಮನೆಗೆ ಕರೆತರಲು ಇತರರ ಜೊತೆ ಕೇಳಿಕೊಳ್ಳುತ್ತಾರೆ, ಅಷ್ಟರಲ್ಲಿಯೇ ಇತರ ಆಟಗಾರರು ಅವರನ್ನು ಕೆವಿಜಿ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಆದರೆ ಆಸ್ಪತ್ರೆಯ ಒಳಪ್ರವೇಶಿಸುತ್ತಿದ್ದಂತೆ ಕುಸಿದು ಬಿದ್ದು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಮೃತರು ತನ್ನ ವೃತ್ತಿ ಸೇವೆಯಲ್ಲಿ ಸುಳ್ಯದಲ್ಲಿ ಜನಾನುರಾಗಿದ್ದರು. ಅವರು ಪತ್ನಿ ಶಾಹಿನಾ ಹಾಗೂ ಇಬ್ಬರು ಹೆಣ್ಣು ಮಕ್ಕಳಾದ ಲಿಹಾ ಮೆಹ್ರೀನ್, ಲನಾ ಮೆಹ್ರೀನ್ ಮತ್ತು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಅವರ ಹುಟ್ಟೂರಾದ ವಯನಾಡ್ ನಲ್ಲಿ ದಫನ ಕಾರ್ಯ ನಡೆಯಲಿದೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!