ಮುಮ್ತಾಜ್ ಅಲಿ ಸಾವಿನ ಪ್ರಕರಣ: ಆರೋಪಿ ಸತ್ತಾರ್ ವಿರುದ್ದ ಗುಡುಗಿದ ಪ್ರತಿಭಾ ಕುಳಾಯಿ
ಮಂಗಳೂರು: ಉದ್ಯಮಿ ಮುಮ್ತಾಜ್ ಅಲಿ ಆತ್ಮಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ ಅಬ್ದುಲ್ ಸತ್ತಾರ್ ವಿರುದ್ಧ ಕಾಂಗ್ರೆಸ್ ನಾಯಕಿ ಪ್ರತಿಭಾ ಕುಳಾಯಿ ಆಕ್ರೊಶ ಹೊರಹಾಕಿದ್ದು ಸತ್ತಾರ್‌ನಿಗೆ ಸರಿಯಾದ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದ್ದಾರೆ.

ಸುರತ್ಕಲ್ ಜಂಕ್ಷನ್‌ನಲ್ಲಿ ಆತನ ಒಂದು ಕೈ ಕಡಿದಿದ್ದಾರೆ, ಆ ಕೈ ವರ್ಕಿಂಗ್ ಕಂಡೀಷನ್‌ನಲ್ಲಿ ಇಲ್ಲ, ಆತ ಕೆಟ್ಟ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದು ಐಷಾರಾಮಿಯಾಗಿ ಜೀವನ ನಡೆಸುತ್ತಿದ್ದಾನೆ ಎಂದು ಅವರು ಆರೋಪಿಸಿದ್ದಾರೆ. ಸಭ್ಯರನ್ನು ಹನಿಟ್ರ್ಯಾಪ್ ಮಾಡಿಕೊಂಡು ದುಡ್ಡು ಮಾಡಿರುವ ಆತನಿಗೆ ಮತ್ತು ಇತರರಿಗೆ ಸರಿಯಾದ ಶಿಕ್ಷೆ ಆಗಬೇಕು, ಒಂದು ವರ್ಷದಿಂದ ಮುಮ್ತಾಜ್ ಅಲಿ ಅವರ ‘ಆತ್ಮದ ಹತ್ಯೆ’ ನಿರಂತರ ಆಗುತ್ತಿತ್ತು ಎಂದು ಅವರು ಹೇಳಿದರು.
ಮುಮ್ತಾಜ್ ಅಲಿಯಂತಹ ವ್ಯಕ್ತಿ ನಮ್ಮಿಂದ ಹೋಗಿ ಆಗಿದೆ, ಅಂತವರು ಸಮಾಜದಲ್ಲಿ ಸಿಗುವುದು ಕಷ್ಟ ಎಂದ ಪ್ರತಿಭಾ ಕುಳಾಯಿಯವರು ಇತ್ತೀಚಿನ ದಿನಗಳಲ್ಲಿ ಎಷ್ಟೋ ಶ್ರೀಮಂತರು ಇಂತಹ ಹನಿಟ್ರ್ಯಾಪ್‌ಗೆ ಬಲಿಯಾಗಿದ್ದಾರೆ, ಇದಕ್ಕೆಲ್ಲಾ ಅಂತ್ಯ ಆಗಬೇಕು, ಇಂತಹ ಜಾಲದಲ್ಲಿ ತೊಡಗಿಕೊಂಡವರಿಗೆ ಕಠಿಣವಾದ ಶಿಕ್ಷೆ ಆಗಲೇಬೇಕು ಎಂದು ಒತ್ತಾಯಿಸಿದರು.