ಅ.13: ಉಕ್ಕುಡ ದರ್ಬೆ ಖಲೀಫಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಆಂಬ್ಯುಲೆನ್ಸ್ ಲೋಕಾರ್ಪಣೆ
ವಿಟ್ಲ: ಖಲೀಫಾ ಚಾರಿಟೇಬಲ್ ಟ್ರಸ್ಟ್ ಉಕ್ಕುಡ ದರ್ಬೆ ವತಿಯಿಂದ ಮರ್‌ಹೂಂ ಹಬೀಬ್ ಉಕ್ಕುಡ ಸ್ಮರಣಾರ್ಥ ಆಂಬ್ಯುಲೆನ್ಸ್ ಲೋಕಾರ್ಪಣಾ ಸಮಾರಂಭ ಅ.13ರಂದು ಉಕ್ಕುಡ ದರ್ಬೆಯಲ್ಲಿರುವ ಖಲೀಫಾ ಚಾರಿಟೇಬಲ್ ಟ್ರಸ್ಟ್ ಕಚೇರಿ ಬಳಿ ನಡೆಯಲಿದೆ.
ಉಕ್ಕುಡ ಬದ್ರಿಯಾ ಜುಮಾ ಮಸೀದಿ ಮುದರ್ರಿಸ್ ಹಾಫಿಲ್ ಅಹ್ಮದ್ ಶರೀಫ್ ಕಾಮಿಲ್ ಸಖಾಫಿ ಅಲ್ ಹಿಕಮಿ ಮಳಲಿ ಉದ್ಘಾಟಿಸಲಿದ್ದು ವಿಟ್ಲ ಸುರಕ್ಷಾ ಹೆಲ್ತ್ ಸೆಂಟರಿನ ವೈದ್ಯಕೀಯ ನಿರ್ದೇಶಕರಾದ ಡಾ.ಗೀತಪ್ರಕಾಶ್ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.