ರಾಷ್ಟ್ರೀಯ

ತಾಂತ್ರಿಕ ದೋಷದಿಂದ ಮೂರು ತಾಸು ಆಕಾಶದಲ್ಲೇ ಸುತ್ತು ಹೊಡೆದ  ವಿಮಾನ, ಪೈಲಟ್ ಗೆ ಪ್ರಶಂಸೆ

ಚೆನ್ನೈ: ತಾಂತ್ರಿಕ ದೋಷ ಕಾಣಿಸಿಕೊಂಡ ಏರ್ ಇಂಡಿಯಾ ವಿಮಾನವೊಂದು ಶುಕ್ರವಾರ ರಾತ್ರಿ ಸುಮಾರು ಮೂರು ತಾಸು ಆಕಾಶದಲ್ಲೇ ಗಿರಕಿ ಹೊಡೆದು ಕೊನೆಗೂ ಸುರಕ್ಷಿತವಾಗಿ ಲ್ಯಾಂಡ್‌ ಆಗುವ ಮೂಲಕ 140 ಪ್ರಯಾಣಿಕರು ಮತ್ತು ವಿಮಾನದ ಸಿಬ್ಬಂದಿಯ ಪ್ರಾಣ ಉಳಿದಿದೆ.

ತಮಿಳುನಾಡಿನ ತಿರುಚ್ಚಿ ವಿಮಾನ ನಿಲ್ದಾಣದಲ್ಲಿ ಈ ವಿಮಾನ ತುರ್ತು ತಿರುಚ್ಚಿಯಿಂದ ಶಾರ್ಜಾಕ್ಕೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ ಟೇಕ್‌ಆಫ್‌ ಆದ ಕೆಲವೇ ಕ್ಷಣಗಳಲ್ಲಿ ಅದರ ಹೈಡ್ರಾಲಿಕ್‌ನ ವ್ಯವಸ್ಥೆಯಲ್ಲಿ ದೋಷ ಕಂಡುಬಂದಿತ್ತು. ಈ ಸಂದರ್ಭದಲ್ಲಿ ಸಮಯಪ್ರಜ್ಞೆ ಮತ್ತು ದಿಟ್ಟತನ ಮೆರೆದು ಸಂಯಮದಿಂದ ಪರಿಸ್ಥಿತಿಯನ್ನು ನಿಭಾಯಿಸಿ ವಿಮಾನವನ್ನು ಆಕಾಶದಲ್ಲೇ ಗಿರಕಿ ಹೊಡೆಯಲಾರಂಭಿಸಿದರು. ಮುಖ್ಯವಾಗಿ ವಿಮಾನದ ಇಂಧನ ಟ್ಯಾಂಕ್‌ ಖಾಲಿಯಾಗಬೇಕಿತ್ತು.
ತುರ್ತು ಲ್ಯಾಂಡಿಂಗ್ ಘೋಷಣೆಯಾದ ಬೆನ್ನಿಗೆ ತಿರುಚ್ಚಿ ನಿಲ್ದಾಣದಲ್ಲಿ ಕಟ್ಟೆಚ್ಚರ ವಹಿಸಲಾಯಿತು. 18 ಆಂಬ್ಯುಲೆನ್ಸ್ , ಅಗ್ನಿಶಾಮಕ ಸಹಿತ ಎಲ್ಲ ತುರ್ತು ವ್ಯವಸ್ಥೆಗಳನ್ನು ಮಾಡಿ ವಿಮಾನಕ್ಕೆ ಲ್ಯಾಂಡಿಂಗ್‌ಗೆ ಸೂಚನೆ ರವಾನಿಸಲಾಯಿತು. ರಾತ್ರಿ 8.14ಕ್ಕೆ ಸುರಕ್ಷಿತವಾಗಿ ವಿಮಾನ ಇಳಿದ ನಂತರ ಎಲ್ಲರೂ ನೆಮ್ಮದಿಯ ನಿಟ್ಟುಸಿರು ಬಿಟ್ಟರು. ಇದಾದ ಬಳಿಕ ಏರ್ ಇಂಡಿಯಾ ವಿಮಾನದಲ್ಲಿದ್ದ 140 ಪ್ರಯಾಣಿಕರು ಸುರಕ್ಷಿತವಾಗಿ ಹೊರಬಂದಿದ್ದಾರೆ.

ವಿಮಾನದ ಪೈಲಟ್ ಮತ್ತು ಸಿಬ್ಬಂದಿಯ ಕಾರ್ಯವನ್ನು ವಿಮಾನ ನಿಲ್ದಾಣದಲ್ಲಿದ್ದ ಜನರು ಶ್ಲಾಘಿಸಿದರು.
ಈ ಏರ್ ಇಂಡಿಯಾ ವಿಮಾನ ಶುಕ್ರವಾರ ಸಂಜೆ 5.15ಕ್ಕೆ ತಿರುಚ್ಚಿ ವಿಮಾನ ನಿಲ್ದಾಣದಿಂದ ಹೊರಟಿತ್ತು. ವಿಮಾನದ ಹೈಡ್ರಾಲಿಕ್ ವ್ಯವಸ್ಥೆಯ ದೋಷದ ಬಗ್ಗೆ ಪೈಲಟ್ ಮಾಹಿತಿ ಪಡೆದ ತಕ್ಷಣ, ಪೈಲಟ್ ಎಟಿಸಿಗೆ ಮಾಹಿತಿ ನೀಡಿದರು. ಇದಾದ ನಂತರ ವಿಮಾನ ತಿರುಚ್ಚಿಯ ಆಕಾಶದಲ್ಲಿ ಸುತ್ತುತ್ತಲೇ ಇತ್ತು. ವಿಮಾನದ ಇಂಧನ ಕಡಿಮೆ ಮಾಡಿದ ನಂತರ ಪೈಲಟ್ ಸುರಕ್ಷಿತ ಲ್ಯಾಂಡಿಂಗ್ ಅನ್ನು ಖಚಿತಪಡಿಸಿದರು. ರಾತ್ರಿ 8.15ಕ್ಕೆ ವಿಮಾನ ಸುರಕ್ಷಿತವಾಗಿ ಲ್ಯಾಂಡ್ ಮಾಡಲಾಯಿತು. ಈ ಮೊದಲು ವಿಮಾನದ ಇಂಧನವನ್ನು ಕಡಿಮೆ ಮಾಡಲಾಗಿತ್ತು. ವಿಮಾನದಲ್ಲಿ ತಾಂತ್ರಿಕ ದೋಷ ಉಂಟಾದ ಬಳಿಕ ವಿಮಾನದ ಪೈಲಟ್ ಅತ್ಯಂತ ಸಂಯಮದಿಂದ ಕಾರ್ಯನಿರ್ವಹಿಸಿ ಪ್ರಯಾಣಿಕರಿಗೆ ಸುರಕ್ಷಿತ ಲ್ಯಾಂಡಿಂಗ್‌ನ ಭರವಸೆ ನೀಡಿದ್ದು ಕೊನೆಗೆ ವಿಮಾನವನ್ನು ಸೇಫ್ ಆಗಿ ಲ್ಯಾಂಡ್ ಮಾಡಿದರು ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!