ಅಂತಾರಾಷ್ಟ್ರೀಯಕರಾವಳಿ

ದಾರುಲ್ ಹಸನಿಯಾ ಅಕಾಡೆಮಿ ದಮಾಮ್ ಘಟಕ ರಚನೆ

ದಮಾಮ್: ಪುತ್ತೂರು ಸಾಲ್ಮರ ದಾರುಲ್ ಹಸನಿಯಾ ಅಕಾಡೆಮಿಯ ಸೌದಿ ಅರೇಬಿಯಾದ ದಮಾಮ್ ನ ನೂತನ ಘಟಕವನ್ನು ದಮಾಮ್ ರೆಡ್ ಪೋಟ್ ರೆಸ್ಟೋರೆಂಟ್ ಸಭಾಂಗಣದಲ್ಲಿ ಸೇರಿದ ಸ್ನೇಹ ಸಂಗಮದಲ್ಲಿ ರಚಿಸಲಾಯಿತು.


ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ಧ ಅಮ್ಜದ್ ಖಾನ್ ಪೋಳ್ಯ ಮಾತನಾಡಿ ದಾರುಲ್ ಹಸನಿಯಾ ಸಂಸ್ಥೆಯನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಲು ಅನಿವಾಸಿ ಮಿತ್ರರ ಸಹಕಾರದ ಅಗತ್ಯವಿದ್ದು ಸಂಸ್ಥೆಯ ಪ್ರಗತಿಗಾಗಿ ನೀವೆಲ್ಲರೂ ಕೈಜೋಡಿಸಬೇಕೆಂದು ಅವರು ಕರೆ ನೀಡಿದರು.

ಮುಖ್ಯ ಅತಿಥಿಯಾಗಿ ಬಶೀರ್ ಹಾಜಿ ದರ್ಬೆ ಉಪಸ್ಥಿತರಿದ್ದರು. ಅನಿವಾಸಿ ಉದ್ಯಮಿಗಳಾದ ಜುಬೈಲ್ ಘಟಕ ಅಧ್ಯಕ್ಷ ಫೈರೋಝ್ ಹಾಜಿ ಪರ್ಲಡ್ಕ, ಜುಬೈಲ್ ಘಟಕದ ಕೋಶಾಧಿಕಾರಿ ಆಸಿಫ್ ಹಾಜಿ ದರ್ಬೆ, ದಾರುಲ್ ಇರ್ಶಾದ್ ದಮಾಮ್ ಘಟಕದ ಉಪಾಧ್ಯಕ್ಷ ರಹೀಂ ಹಾಜಿ ವಲಚ್ಚಿಲ್, ಆಸಿಫ್ ಬಪ್ಪಳಿಗೆ, ಫಹದ್ ದರ್ಬೆ ಮೊಲಾದವರು ಉಪಸ್ಥಿತರಿದ್ದರು.


ದಾರುಲ್ ಹಸನಿಯಾ ಅಕಾಡೆಮಿಯ ನೂತನ ದಮಾಮ್ ಘಟಕವನ್ನು ಇದೇ ಸಂದರ್ಭದಲ್ಲಿ ರಚಿಸಲಾಯಿತು. ಗೌರವಾಧ್ಯಕ್ಷರಾಗಿ ಅಮ್ಜದ್ ಖಾನ್ ಪೋಳ್ಯ ಅವರನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಅಶ್ರಫ್ ನೌಶಾದ್ ಪೋಳ್ಯ ಕೆ.ಎಸ್.ಎ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ನೌಫಲ್ ಕೂರ್ನಡ್ಕ ಕೆ.ಎಸ್.ಎ ಅವರನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ರಫೀಕ್ ಉಪ್ಪಿನಂಗಡಿ ನ್ಯಾಷನಲ್, ಜೊತೆ ಕಾರ್ಯದರ್ಶಿಯಾಗಿ ಸಲೀಂ ಕೂರ್ನಡ್ಕ ಕೆ.ಎಸ್.ಎ, ಕೋಶಾಧಿಕಾರಿಯಾಗಿ ಅಥಾವುಲ್ಲಾ ಕಡಬ ಕೆ.ಎಸ್.ಎ ಅವರನ್ನು ಆಯ್ಕೆ ಮಾಡಲಾಯಿತು.  ಅಮ್ಜದ್ ಖಾನ್ ಪೋಳ್ಯ ಸ್ವಾಗತಿಸಿದರು. ನೌಶಾದ್ ಪೋಳ್ಯ ಕಾರ್ಯಕ್ರಮ ನಿರ್ವಹಿಸಿದರು.

Leave a Reply

Your email address will not be published. Required fields are marked *

error: Content is protected !!