ಅಂತಾರಾಷ್ಟ್ರೀಯ

ಅಮೆರಿಕ: ಡೊನಾಲ್ಡ್ ಟ್ರಂಪ್ ಆದೇಶಕ್ಕೆ ತಡೆ ನೀಡಿದ ನ್ಯಾಯಾಲಯ

ಅಮೆರಿಕದ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದ ದಿನವೇ, ಡೊನಾಲ್ಡ್ ಟ್ರಂಪ್ ದೇಶದ ವಲಸೆ ನೀತಿಯನ್ನು ಮರುರೂಪಿಸುವ ಮಹತ್ವದ ಘೋಷಣೆ ಮಾಡಿದ್ದರು. ಜನ್ಮಸಿದ್ಧ ಪೌರತ್ವ ಅಥವಾ ಹುಟ್ಟಿನಿಂದಲೇ ಸಿಗುವ ಪೌರತ್ವ ಕೊನೆಗೊಳಿಸುವ ಟ್ರಂಪ್ ಕಾರ್ಯಾಕಾರಿ ಆದೇಶಕ್ಕೆ ನ್ಯಾಯಾಲಯ ತಡೆ ನೀಡಿದೆ.


ಟ್ರಂಪ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ, ಜನ್ಮಸಿದ್ಧ ಪೌರತ್ವವನ್ನು ಕೊನೆಗೊಳಿಸುವ ಕಾರ್ಯಕಾರಿ ಆದೇಶಕ್ಕೆ ಸಹಿ ಹಾಕಿದರು. ಟ್ರಂಪ್ ಅವರ ಆದೇಶ ಪ್ರಶ್ನಿಸಿ ಹಲವು ರಾಜ್ಯಗಳು ಕೋರ್ಟ್‌ ಮೆಟ್ಟಿಲೇರಿದ್ದವು. ಇದೀಗ ನ್ಯಾಯಮೂರ್ತಿ ಜಾನ್ ಕಫೆನಾರ್‌ ಟ್ರಂಪ್ ಆದೇಶಕ್ಕೆ 14 ದಿನಗಳ ತಾತ್ಕಾಲಿಕ ತಡೆ ನೀಡಿದ್ದಾರೆ.


ಮುಂದಿನ ತಿಂಗಳವರೆಗೆ, ಅವರ ಪೋಷಕರು ಅಮೆರಿಕನ್ನರಲ್ಲದಿದ್ದರೂ ಹುಟ್ಟಿನಿಂದಲೇ ಅಮೆರಿಕದ ಪೌರತ್ವವನ್ನು ಹೊಂದಿರುವ ಜನರಿಗೆ ಅಮೆರಿಕದ ಪೌರತ್ವವನ್ನು ಕಳೆದುಕೊಳ್ಳುವ ಭಯವಿತ್ತು. ಆದಾಗ್ಯೂ, ನ್ಯಾಯಾಲಯವು ಡೊನಾಲ್ಡ್ ಟ್ರಂಪ್ ಅವರ ಆದೇಶವನ್ನು ಅಸಾಂವಿಧಾನಿಕ ಎಂದು ಸ್ಪಷ್ಟವಾಗಿ ಘೋಷಿಸಿತು.

Leave a Reply

Your email address will not be published. Required fields are marked *

error: Content is protected !!