ಕಾರು ಅಪಘಾತದಲ್ಲಿ ಗಾಯಗೊಂಡ ಯುವ ಬ್ಯಾಟ್ಸ್ ಮೆನ್ ಮುಶೀರ್ ಖಾನ್ ಚೇತರಿಕೆ
ಕಾರು ಅಪಘಾತದಲ್ಲಿ ತೀವ್ರ ಗಾಯಗೊಂಡಿರುವ ಯುವ ಬ್ಯಾಟ್ಸ್ ಮೆನ್ ಮುಶೀರ್ ಖಾನ್ ಸದ್ಯ ಚೇತರಿಸುತ್ತಿದ್ದು ಮೊದಲಬಾರಿಗೆಅವರುತಮ್ಮಸ್ಥಿತಿಯಬಗ್ಗೆ ಮಾತನಾಡಿದ್ದಾರೆ. ‘ನನಗೆ ಹೊಸ ಜೀವನ ನೀಡಿದ ದೇವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ನಾನು ಸದ್ಯಕ್ಕೆ ಚೆನ್ನಾಗಿದ್ದೇನೆ. ಅಪಘಾತದ ವೇಳೆ ನನ್ನ ಜೊತೆಯಲ್ಲಿದ್ದ ನನ್ನ ತಂದೆ ಕೂಡ ಆರೋಗ್ಯವಾಗಿದ್ದಾರೆ. ನಿಮ್ಮೆಲ್ಲರ ಪ್ರಾರ್ಥನೆಗಳಿಗೆ ಧನ್ಯವಾದಗಳು ಎಂದು ತಿಳಿಸಿದ್ದಾರೆ.
ಮುಶೀರ್ ತಂದೆ ನೌಶಾದ್ ಮಾತನಾಡಿ, ಹೊಸ ಜೀವನ ನೀಡಿದ ದೇವರಿಗೆ ಮೊದಲು ಕೃತಜ್ಞತೆ ಸಲ್ಲಿಸುತ್ತೇನೆ. ನಮಗಾಗಿ ಪ್ರಾರ್ಥಿಸಿದ ಎಲ್ಲರಿಗೂ ಧನ್ಯವಾದ ಹೇಳುತ್ತೇವೆ. ಹಾಗೆಯೇ ಮುಶೀರ್‌ನ ಸಂಪೂರ್ಣ ಕಾಳಜಿ ವಹಿಸುತ್ತಿರುವ ನಮ್ಮ ಎಮ್ಸಿಎ ಮತ್ತು ಬಿಸಿಸಿಐಗೆ ಧನ್ಯವಾದ ಹೇಳಲು ಬಯಸುತ್ತೇನೆ ಎಂದು ಹೇಳಿದ್ದಾರೆ.