ಸುಳ್ಯ: ನಿಗೂಢವಾಗಿ ಕಣ್ಮರೆಯಾಗಿದ್ದ ಮಹಿಳೆಯ ಮೃತದೇಹ ಪತ್ತೆ
ಸುಳ್ಯ: ಮರ್ಕಂಜದ ಮಿತ್ತಡ್ಕದ ಮಹಿಳೆಯೋರ್ವರು ಕಾಣೆಯಾದ ಹಿನ್ನೆಲೆಯಲ್ಲಿ ಬಾವಿಗೆ ಹಾರಿರಬಹುದೆಂಬ ಅನುಮಾನದಿಂದ ಬಾವಿಯನ್ನು ಅಗೆದು ನೋಡುವ ಕಾರ್ಯಚರಣೆ ನಡೆಸಲಾಗಿದ್ದು ಇದೀಗ ಬಾವಿಯಲ್ಲಿ ಮಹಿಳೆ ಶೋಭಾಲತಾ ಅವರ ಮೃತದೇಹ ಪತ್ತೆಯಾಗಿದೆ.
ಶೋಭಾಲತಾ ರವರು ಸೆ.24ರ ಮಧ್ಯಾಹ್ನ ಮನೆಯಿಂದ ಕಾಣೆಯಾಗಿದ್ದರು. ಹುಡುಕಾಡಿದರೂ ಪತ್ತೆಯಾಗಿರಲಿಲ್ಲ. ಹೀಗಾಗಿ ಸಂಶಯದಿಂದ ಅವರ ಮನೆ ಬಳಿಯ ಬಾವಿಯಲ್ಲಿ ಹುಡುಕಾಟ ನಡೆಸಲಾಗಿತ್ತು. ನೀರು ಆರಿಸಿ ಹುಡುಕುವ ಪ್ರಯತ್ನ ಮಾಡಿದಾಗ ಒಳಭಬಾಗದಲ್ಲಿ ಮಣ್ಣು ಜರಿಯತೊಡಗಿತು. ಹೀಗಾಗಿ ಹುಡುಕುವ ಪ್ರಯತ್ನ ನಿಲ್ಲಿಸಲಾಯಿತು. ಬಳಿಕ ಅಗ್ನಿಶಾಮಕ ದಳದವರು ಬಂದು ಕೊಕ್ಕೆ ಹಾಕಿ ಹುಡುಕತೊಡಗಿದರು. ಅಲ್ಲದೇ ಕ್ಯಾಮಾರ ಇಳಿಸಿಯೂ ಶೋಧಿಸಲಾಯಿತು. ಆದರೂ ಮೃತದೇಹದ ಕುರುಹು ಸಿಕ್ಕಿರಲಿಲ್ಲ.
ನಂತರ ಸುಳ್ಯ ತಹಶೀಲ್ದಾರರ ಸೂಚನೆಯಂತೆ ಸುಳ್ಯ ಪೋಲೀಸರ ಸಹಕಾರದಿಂದ
ಬಾವಿಯನ್ನು ಅಗೆದು ಬಾವಿಯೊಳಗಿನ ಮಣ್ಣು ತೆಗೆಯುವ ಕಾರ್ಯಚರಣೆ ಸೆ.27ರ ಬೆಳಿಗ್ಗೆಯಿಂದ ಆರಂಭಿಸಲಾಯಿತು. ಇದೀಗ ಮಣ್ಣು ತೆಗೆದ ಬಳಿಕ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಘಟಕದವರು ಬಾವಿಯೊಳಗೆ ಇಳಿದು ಹುಡಕುವ ಕಾರ್ಯಚರಣೆ ಆರಂಭಿಸಿದಾಗ ಮೃತದೇಹ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. ಬಾವಿಯಿಂದ ಮೃತದೇಹ ಹೊರತೆಗೆಯಲಾಗಿದೆ ಎಂದು ತಿಳಿದು ಬಂದಿದೆ.