ರಸ್ತೆ ಅಪಘಾತ: ಯುವ ಬ್ಯಾಟ್ಸ್’ಮೆನ್ ಮುಶೀರ್ ಖಾನ್ ಗೆ ಗಂಭೀರ ಗಾಯ
ಮುಂಬೈ ತಂಡದ ಯುವ ಬ್ಯಾಟರ್ ಮುಶೀರ್ ಖಾನ್ ರಸ್ತೆ ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದಾರೆ. ತಂದೆ ನೌಶದ್ ಖಾನ್ ಅವರೊಂದಿಗೆ ಪ್ರಯಾಣಿಸುತ್ತಿದ್ದ ವೇಳೆ ಕಾರು ಪಲ್ಟಿಯಾಗಿದ್ದು, ಈ ವೇಳೆ ಮುಶೀರ್ ಅವರ ಮೂಳೆ ಮುರಿತಕ್ಕೊಳಗಾಗಿದೆ. ಹೀಗಾಗಿ ಮುಂಬರುವ ಇರಾನಿ ಕಪ್ ಪಂದ್ಯಕ್ಕೆ ಮುಶೀರ್ ಖಾನ್ ಅಲಭ್ಯರಾಗಲಿದ್ದಾರೆ ಎಂದು ವರದಿಯಾಗಿದೆ.
ಮುಶೀರ್ ಖಾನ್ ಇತ್ತೀಚೆಗೆ ನಡೆದ ದುಲೀಪ್ ಟ್ರೋಫಿ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿ ಮಿಂಚಿದ್ದರು. ಮುಂಬರುವ ಇರಾನಿ ಕಪ್ ಪಂದ್ಯದಲ್ಲಿ ಮುಶೀರ್ ಖಾನ್ ಮುಂಬೈ ಪರ ಕಣಕ್ಕಿಳಿಯಬೇಕಿತ್ತು. ಇದೀಗ ಗಾಯಗೊಂಡ ಕಾರಣ ಅವರು ಅಕ್ಟೋಬರ್ 1 ರಿಂದ ಆರಂಭ ಆಗಲಿರುವ ಇರಾನಿ ಟ್ರೋಫಿಯಿಂದ ಹೊರಗುಳಿಯುವುದು ಬಹುತೇಕ ಖಚಿತ ಆಗಿದೆ.