ಅಂತಾರಾಷ್ಟ್ರೀಯರಾಜಕೀಯ

ಶ್ರೀಲಂಕಾದ ನೂತನ ಅಧ್ಯಕ್ಷರಾಗಿ ಅನುರಾ ಕುಮಾರ್ ದಿಸ್ಸಾನಾಯಕೆ

ಕೊಲೊಂಬೊ: ಶ್ರೀಲಂಕಾದ ನೂತನ ಅಧ್ಯಕ್ಷರಾಗಿ ಅನುರಾ ಕುಮಾರ್ ದಿಸ್ಸಾನಾಯಕೆ ಆಯ್ಕೆಯಾಗಿದ್ದು ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ದಿಸ್ಸಾನಾಯಕೆ

ಅಧ್ಯಕ್ಷರ ಕಾರ್ಯಾಲಯದಲ್ಲಿ ಏರ್ಪಡಿಸಲಾಗಿದ್ದ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ 56 ವರ್ಷದ ಅನುರ ಕುಮಾರ್ ದಿಸ್ಸಾನಾಯಕೆಗೆ ಶ್ರೀಲಂಕಾ ಮುಖ್ಯ ನ್ಯಾಯಮೂರ್ತಿ ಜಯಂತ್ ಜಯಸೂರ್ಯ ಪ್ರಮಾಣ ವಚನ ಬೋಧಿಸಿದರು.

ಶ್ರೀಲಂಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ತಮ್ಮ ಸಮೀಪದ ಪ್ರತಿಸ್ಪರ್ಧಿ ಸಮಗಿ ಜನ ಬಲವೇಗಯ ಮೈತ್ರಿಕೂಟದ ಸಜಿತ್ ಪ್ರೇಮದಾಸರನ್ನು ನ್ಯಾಷನಲ್ ಪೀಪಲ್ಸ್ ಪವರ್ ಮೈತ್ರಿಕೂಟದ ಹಾಗೂ ಮಾರ್ಕ್ಸಿಸ್ಡ್ ಜನತಾ ವಿಮುಕ್ತಿ ಪೆರಮುನ ಪಕ್ಷದ ನಾಯಕ ದಿಸ್ಸಾನಾಯಕೆ ಪರಾಭವಗೊಳಿಸಿದ್ದರು. ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ದಿಸ್ಸಾನಾಯಕೆ ದೇಶದ ಆರ್ಥಿಕತೆಯನ್ನು ಬಲಪಡಿಸಿ, ಭ್ರಷ್ಟಾಚಾರವನ್ನು ತೊಡೆದು ಹಾಕುವ ಭರವಸೆ ನೀಡಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು.

ಚುನಾವಣೆಯಲ್ಲಿ ದಿಸ್ಸಾನಾಯಕೆ 105,264 ಪ್ರಥಮ ಪ್ರಾಶಸ್ತ್ರ ಮತದೊಂದಿಗೆ 5.74 ದಶಲಕ್ಷ ಮತ ಪಡೆದರೆ, ಅವರ ಸಮೀಪದ ಪ್ರತಿಸ್ಪರ್ಧಿ ಪ್ರೇಮದಾಸ 167,867 ಪ್ರಥಮ ಪ್ರಾಶಸ್ತ್ಯದ ಮತದೊಂದಿಗೆ 4.53 ದಶಲಕ್ಷ ಮತ ಪಡೆದಿದ್ದರು.

Leave a Reply

Your email address will not be published. Required fields are marked *

error: Content is protected !!