ಅಂತಾರಾಷ್ಟ್ರೀಯ

ಇಸ್ರೇಲ್-ಫೆಲೆಸ್ತೀನ್ ಯುದ್ಧದಲ್ಲಿ ಎಷ್ಟು ಪತ್ರಕರ್ತರು ಮೃತಪಟ್ಟಿದ್ದಾರೆ ಗೊತ್ತೇ..?

ಹೊಸದಿಲ್ಲಿ: ಇಸ್ರೇಲ್ ಮತ್ತು ಫೆಲೆಸ್ತೀನ್ ನಡುವೆ ಅ.7ರಂದು ಯುದ್ಧ ಆರಂಭವಾದ ಬಳಿಕ ಅಂದಾಜು 4,000ಕ್ಕೂ ಅಧಿಕ ಜನರು ಮೃತಪಟ್ಟಿದ್ದು, ಆ ಪೈಕಿ ಕನಿಷ್ಠ 21 ಪತ್ರಕರ್ತರು ಸೇರಿದ್ದಾರೆ ಎಂದು ‘ಕಮಿಟಿ ಟು ಪ್ರೊಟೆಕ್ಟ್ ಜರ್ನಲಿಸ್ಟ್ಸ್’ ಹೇಳಿದೆ.

ಸಾಂದರ್ಭಿಕ ಚಿತ್ರ

ಈ ವರೆಗೆ 21 ಪತ್ರಕರ್ತರು ಮೃತಪಟ್ಟಿರುವುದು ದೃಢಪಟ್ಟಿದ್ದು, 17 ಜನರು ಫೆಲೆಸ್ತೀನ್, ಮೂವರು ಇಸ್ರೇಲ್ ಮತ್ತು ಓರ್ವ ಲೆಬನಾನ್‌ಗೆ ಸೇರಿದವರಾಗಿದ್ದಾರೆ. ಎಂಟು ಪತ್ರಕರ್ತರು ಗಾಯಗೊಂಡಿದ್ದು, ಮೂವರು ನಾಪತ್ತೆಯಾಗಿರುವ ಅಥವಾ ಬಂಧಿಸಲ್ಪಟ್ಟಿರುವ ವರದಿಗಳೂ ಇವೆ ಎಂದು ಸಿಪಿಜೆ ಹೇಳಿರುವುದಾಗಿ ವರದಿಯಾಗಿದೆ.

Leave a Reply

Your email address will not be published. Required fields are marked *

error: Content is protected !!